ಹೆಚ್ ಡಿ ಕೋಟೆ: ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ ಮೂರುಕಡೆ ಕಳ್ಳತನ ನಡೆಸಿದ್ದಾರೆ. ಮೊನ್ನೆಯಷ್ಟೆ ಒಂದನೇ ಮುಖ್ಯರಸ್ತೆಯ ಮಾರಮ್ಮನ ದೇವಸ್ಥಾನಕ್ಕೆ ನುಗ್ಗಿ ಗೋಲಕ ಮುರಿದು ನಗದು ಮತ್ತು ಚಿನ್ನಾಭರಣ ದೋಚಿದ ಪ್ರಕರಣ ಮಾಸುವ ಮುನ್ನವೇ ನೆನ್ನೆ ರಾತ್ರಿ ಒಂದನೇ ಮುಖ್ಯರಸ್ತೆಯ ಶೇಷಾದ್ರಿರವರ ಮನೆ,  ಸ್ಟೇಡಿಯಂ ಬಡಾವಣೆಯ ಪೋಲಿಸ್  ಕೆ,ಕೆ, ಮಹದೇವ ರವರ ಮನೆ, ವಿಶ್ವನಾಥ ಕಾಲೋನಿಯ ಗೋಬಿ ವ್ಯಾಪರಿ ಕೃಷ್ಣ ರವರ ಮನೆಯ ಬಾಗಿಲನ್ನು ಮುರಿದು ಮನೆಯ ಒಳ ನುಗ್ಗಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ಜೊತೆಗೆ ಸಿಸಿ ಟಿವಿ ಮತ್ತು  ಡಿವಿಆರ್ ಅನ್ನು ಖದೀಮರು ದೋಚಿದ್ದಾರೆ.

ಕಳ್ಳತನ ಆಗಿ ಐದು ದಿನ ಮಾಸುವ ಮುನ್ನವೆ ಇಂದು ಬೆಳಗಿನ ಜಾವ ಮೂರು ಕಡೆಗಳಲ್ಲಿ ನಡೆದಿರುವ ಕಳ್ಳತನದ ಪ್ರಕರಣಗಳು ಪಟ್ಟಣದ ಜನತೆಯನ್ನ  ಭಯ ಬೀತರಾಗುವಂತೆ ಮಾಡಿವೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹದಿನೈದಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ಕಳೆದ ಹತ್ತು ದಿನದಿಂದ ಹಾಸಂಬೆ ಉತ್ಸವಕ್ಕೆ ಮತ್ತು ಬೇರೆ ಸ್ಥಳಕ್ಕೆ  ಬಂದೂಬಸ್ತ್ ಗಾಗಿ ವಾರಗಟ್ಟಲೇ ಕರ್ತವ್ಯಕ್ಕೆ ತೆರಳಿರುವ ಕಾರಣ ರಾತ್ರಿ ವೇಳೆಯಲ್ಲಿ ಗಸ್ತು ಮಾಡಲು ಕಷ್ಟವಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಪೊಲೀಸ್ ನವರು ತಮ್ಮ ಅಸಾಯಕತೆ ಹೇಳಿಕೊಳ್ಳುತ್ತಿದ್ದಾರೆ.

ಸದ್ಯ ಕಳ್ಳತನ ಪ್ರಕರಣ ಪತ್ತೆಹಚ್ಚಲು ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಹಾಗೂ ಸೋಕೋ ತಂಡದವರು ಆಗಮಿಸಿದ್ದು ತನಿಖೆ ಕಾರ್ಯ ಚುರುಕು ಗೊಳಿಸಿದ್ದಾರೆ.