ಮೈಸೂರು: ಏಷ್ಯಾದ ಅತಿ ದೊಡ್ಡ ಮಾರುಕಟ್ಟೆ ಮೈಸೂರಿನ APMC ಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು,  ತಡರಾತ್ರಿ ಅಂಗಡಿ ಮಳಿಗೆಗಳನ್ನ ನುಗ್ಗಿ ಕಳ್ಳತನ ಮಾಡಿದ್ದಾರೆ.  ಅಂಗಡಿ ಶಟರ್ ಮುರಿದು  ಖತರ್ನಾಕ್ ಕಳ್ಳರು ಕಳ್ಳತನ ಮಾಡಿದ್ದಾರೆ.  ಅಂಗಡಿ ಕಳ್ಳತನ ಮಾಡುವುದು cctv ಯಲ್ಲಿ ಸೆರೆಯಾಗಿದೆ.

ಕಳೆದ ವಾರವಷ್ಟೇ APMC ಯಲ್ಲಿ  ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಒಂದು ವಾರದಲ್ಲೇ ಸುಮಾರು 20 ಅಂಗಡಿಗಳಿಗೆ ಕನ್ನ ಹಾಕಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಬಗ್ಗೆ ವರ್ತಕರ ಆರೋಪ ಕೇಳಿಬಂದಿದೆ. ಮೈಸೂರಿನ ದಕ್ಷಿಣ ಉಪವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.