ಮೈಸೂರು: ಅತ್ತೆ ಮನೆಗೆ ಹೋಗಿ ಹಿಂದಿರಿಗಿದ ಇಂಜಿನಿಯರ್ ಮನೆಯಲ್ಲಿ 9 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾದ ಘಟನೆ ವಿಜಯನಗರದ 4 ನೇ ಹಂತದಲ್ಲಿ ನಡೆದಿದೆ.

156 ಗ್ರಾಂ ಚಿನ್ನಾಭರಣ 2 ಕೆಜಿ ಬೆಳ್ಳಿ ಪದಾರ್ಥ ಸೇರಿದಂತೆ 9 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಲಕ್ಷ್ಮಿನಾರಾಯಣ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದೆ.

ಪತ್ನಿ ಗೌರಿ ರವರು ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿಯ ತಾಯಿ ಮನೆಗೆ ದಂಪತಿ ತೆರಳಿದ್ದು ಹಿಂದಿರುಗಿದಾಗ ಮನೆ ಬೀಗ ಮುರಿದಿತ್ತು. ಪರಿಶೀಲನೆ ನಡೆಸಿದಾಗ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳು ಕಾಣೆಯಾಗಿದೆ. ಈ ಸಂಬಂಧ ಲಕ್ಷ್ಮಿನಾರಾಯಣ ರವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.