ಮೈಸೂರು : ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಖದೀಮರು ದೋಚಿದ ಘಟನೆ ಮೈಸೂರು ತಾಲ್ಲೂಕು ನಾಗವಾಲ ಗ್ರಾಮದಲ್ಲಿ ನಡೆದಿದೆ.

ರೇಣುಕ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯವರು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವೇಳೆ ಕಳ್ಳತನವಾಗಿದೆ. 3,26,700 ರೂ ನಗದು, 276 ಗ್ರಾಂ ಚಿನ್ನ, 1350 ಗ್ರಾಂ ಬೆಳ್ಳಿ ಕಳ್ಳತನವಾಗಿದೆ. ಸುಮಾರು 22 ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ನಗದು ಕಳ್ಳತನವಾಗಿದೆ. ಸ್ಥಳಕ್ಕೆ ಇಲವಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

