ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಗಜಪಯಣಕ್ಕೆ ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿದೆ. ಆಗಸ್ಟ್ 4 ರಂದು ಕಾಡಿನಿಂದ ನಾಡಿನತ್ತ ಗಜಪಡೆ ಬರಲಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿದೆ.
ಶಿಬಿರಗಳಿಂದ ವಿವಿಧ ಆನೆಗಳನ್ನು ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಈಗಾಗಲೇ ಆನೆಗಳ ಆರೋಗ್ಯ ತಪಾಸಣೆ ಪೂರ್ಣವಾಗಿದೆ. ಶಿಬಿರದಲ್ಲಿರುವ ಹೆಣ್ಣು ಆನೆಗಳ ಗರ್ಭಾದಾರಣೆ ಪರೀಕ್ಷೆಗಾಗಿ ರಕ್ತಗಳ ಮಾದರಿ ಸಂಗ್ರಹಿಸಲಾಗಿದೆ. Progesterone, Ultra Sound Scanning ಹಾಗೂ Fecal ಮಾದರಿ ಸಂಗ್ರಹಿಸಿ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಮೊದಲ ತಂಡದ ಆನೆಗಳ ಪಟ್ಟಿ. 1. ಅಭಿಮನ್ಯು, ಗಂಡು : 59 ವರ್ಷ, (ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ). 2. ಪ್ರಶಾಂತ, ಗಂಡು : 53 ವರ್ಷ (ದುಬಾರೆ ಆನೆ ಶಿಬಿರ, ಮಡಿಕೇರಿ) 3. ಭೀಮ, ಗಂಡು : 25 ವರ್ಷ (ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ),
4. ಮಹೇಂದ್ರ, ಗಂಡು : 42 ವರ್ಷ. (ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ), 5. ಧನಂಜಯ, ಗಂಡು : 45 ವರ್ಷ. (ದುಬಾರೆ ಆನೆ ಶಿಬಿರ, ಮಡಿಕೇರಿ), 6. ಕಂಜನ್, ಗಂಡು : 26 ವರ್ಷ. (ದುಬಾರೆ ಆನೆ ಶಿಬಿರ, ಮಡಿಕೇರಿ), 7. ಏಕಲವ್ಯ, ಗಂಡು : 40 ವರ್ಷ. (ಮತ್ತಿಗೋಡು ಆನೆಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ), 8. ಕಾವೇರಿ, ಹೆಣ್ಣು : 45 ವರ್ಷ. (ದುಬಾರೆ ಆನೆ ಶಿಬಿರ, ಮಡಿಕೇರಿ) 9. ಲಕ್ಷ್ಮಿ, ಹೆಣ್ಣು : 54 ವರ್ಷ. (ಬಳ್ಳೆ ಆನೆ ಶಿಬಿರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ).

