ಮೈಸೂರು : ಮನೆ ಕಳ್ಳತನ, ಸರಗಳ್ಳತನ, ದರೋಡೆ, ವಂಚನೆಯಂತಹ ಪ್ರಕರಣಗಳಾಯಿತು. ಈಗ ಅನ್ನದಾತರ ಬೆಳೆಗೆ ಕನ್ನ ಹಾಕಿದ್ದಾರೆ. ರೈತ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನೆ ಕಿಡಿಗೇಡಿಗಳು ಕದಿಯುತ್ತಿದ್ದಾರೆ.

ಕಲ್ಲಂಗಡಿ ಬೆಳೆಯನ್ನ ರಾತ್ರೋರಾತ್ರಿ ಖದೀಮರು ಕಳ್ಳತನ ಮಾಡಿದ್ದಾರೆ. ಪಿರಿಯಾಪಟ್ಟಣದ ಆಲನಹಳ್ಳಿ ಗ್ರಾಮದ ರೈತ ತಮ್ಮೇಗೌಡ ಎಂಬುವರ ಜಮೀನಿನಲ್ಲಿ ಕಳ್ಳತನ ನಡೆದಿದೆ. ತಮ್ಮ ಒಂದು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದರು.

ಭೂಮಿ ತುಂಬಾ ಎದ್ದು ಕಾಣುತ್ತಿದ್ದ ಸುಮಾರು ಏಳು ಟನ್ನಷ್ಟು ಕಲ್ಲಂಗಡಿಯಿತ್ತು. ರಾತ್ತೋರಾತ್ರಿ ಗೂಡ್ಸ್ ವಾಹನಗಳಲ್ಲಿ ಬಂದು ಕಲ್ಲಂಗಡಿ ತುಂಬಿಕೊಂಡು ಕಳ್ಳರು ಹೋಗಿದ್ದಾರೆ. ಸಾಲ ಮಾಡಿ ಬೆಳೆದಿದ್ದ ಬೆಳೆ ಕಳೆದುಕೊಂಡು ರೈತ ಕಂಗಾಲಾಗಿದ್ದರು. ರೈತ ನಂಜುಂಡಿ ಇದಕ್ಕೆ ಸಂಬಂಧಪಟ್ಟಂತೆ ಬೈಲಕುಪ್ಪ ಪೊಲೀಸ್ ಠಾಣೆಗೆ ಮನವಿ ಮಾಕೊಂಡಿದ್ದಾರೆ.