ಮೈಸೂರು : ಸುಮಾರು ಹತ್ತು ಲಕ್ಷ ಮೌಲ್ಯದ ಅಡಿಕೆ ದೋಚಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆಯಲ್ಲಿ ನಡೆದಿದೆ.

ಟಿಬೆಟಿಯನ್ ರೈತನ ಅಡಿಕೆ ತೋಟಕ್ಕೆ ಖನ್ನ ಹಾಕಿದ್ದಾರೆ. ಗುಳ್ಳೇದಲ್ಲ ಟಿಬೇಟ್ ಕ್ಯಾಂಪಿನ ನಿವಾಸಿ ಚಂಬಾ ಎಂಬ ರೈತನಿಗೆ ಸೇರಿದ ಅಡಿಕೆ ತೋಟ ಇದಾಗಿದೆ.

ತಿರುಮಲಾಪುರ ಗ್ರಾಮದ ಮುಖ್ಯ ರಸ್ತೆಯ ಅಂಚಿನಲ್ಲಿ ಇರುವ ಟಿಬೆಟಿಯನ್ ರೈತನ ತೋಟವಾಗಿದ್ದು, ಕಳೆದ ಐದು ವರ್ಷದಿಂದ 2 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದರು. ಕೊಯ್ದು ಗುಡ್ಡೆ ಹಾಕಿದ್ದ ಅಸಿ ಅಡಿಕೆಯನ್ನು ಕಿಡಿಗೇಡಿಗಳು ದೋಚಿದರು.

ಒಂದೇ ರಾತ್ರಿಯಲ್ಲಿ ಪ್ಲಾನ್ ಮಾಡಿ ಕಳ್ಳರು ಕದ್ದೋಯ್ದಿದ್ದಾರೆ. ಇನ್ನೆರಡು ಮೂರು ದಿನದಲ್ಲಿ ಹಸಿ ಅಡಿಕೆ ಮಾರಾಟ ಮಾಡಬೇಕಾಗಿತ್ತು. ಕೈಗೆ ಬಂದ ಬೆಳೆ ಕಳೆದುಕೊಂಡು ರೈತ ಕಂಗಾಲಾಗಿದ್ದಾರೆ. ಬೈಲದಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.