ಮೈಸೂರು: ಸಾಲು ಮರದ ತಿಮ್ಮಕ್ಕ ವಿಧಿವಶರಾದ ಹಿನ್ನಲೆ ಜಯನಗರದಲ್ಲಿರುವ  ಸಾಲುಮರದ ತಿಮ್ಮಕ್ಕ ಉದ್ಯಾನವನ ಮುಂಭಾಗ ಪರಿಸರ ಪ್ರೇಮಿಗಳು ಅವರ ಭಾವಚಿತ್ರ ಪ್ರದರ್ಶಿಸಿ ಸಂತಾಪ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ವೈದ್ಯರಾದ ಡಾ.ಎಸ್ ಪಿ ಯೋಗಣ್ಣ  ಮರಗಳನ್ನು ತನ್ನ ಹೆತ್ತ ಮಕ್ಕಳಂತೆ ಸಲುಹಿದ ಆ ಮಹಾತಾಯಿಯ ಪರಿಸರ ಪ್ರೇಮ, ಕಾಳಜಿ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಅದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ  ಎಂದು ಹೇಳಿದರು.

ಈ ಸಂದರ್ಭದಲ್ಲಿ  ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು,  ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,  ಜೆಡಿಎಸ್ ಕಾರ್ಯಧ್ಯಕ್ಷ  ಎಸ್ ಪ್ರಕಾಶ್ ಪ್ರಿಯದರ್ಶನ್,  ಜಿ ರಾಘವೇಂದ್ರ, ವರದೇ ಗೌಡ,  ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,  ಕಡಕೋಳ ಜಗದೀಶ್,  ಅಪೂರ್ವ ಸುರೇಶ್, ಲೋಕೇಶ್,  ಜತ್ತಿ ಪ್ರಸಾದ್,  ಸುಚೇಂದ್ರ,   ಹಾಗೂ ಇನ್ನಿತರ ಸಭೆಯಲ್ಲಿ ಭಾಗಿಯಾಗಿದ್ದರು.