ಮೈಸೂರು: ಸ್ಕೂಟಿಯಲ್ಲಿದ್ದ 50 ಸಾವಿರ ಕಳ್ಳರ ಪಾಲಾದ ಘಟನೆ ನಂಜನಗೂಡಿನ ಮಿನಿ ವಿಧಾನಸೌಧದ ಬಳಿ ನಡೆದಿದೆ.

ಹೂಸ್ಕೂರು ಗ್ರಾಮದ ಚಂದ್ರು ಎಂಬುವರಿಗೆ ಸೇರಿದ ಸ್ಕೂಟಿ. ಹಾಡುಹಗಲೇ ಮೂವರು ಖದೀಮರು ಸ್ಕೂಟಿಯ ಸೀಟನ್ನು ಬಲವಂತವಾಗಿ ಎಳೆದು ಢಿಕ್ಕಿಯಲ್ಲಿದ್ದ ಹಣವನ್ನ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಎಸ್.ಬಿ.ಎಂ.ಬ್ಯಾಂಕ್ ನಿಂದ ಚಂದ್ರು ರವರು 3.5 ಲಕ್ಷ ಡ್ರಾ ಮಾಡಿ ಸ್ಕೂಟಿಯಲ್ಲಿ ಇಟ್ಟಿದ್ದಾರೆ. ಪತ್ರ ಬರಹಗಾರ ನಾಗರಾಜು ರವರ ಕಚೇರಿಗೆ ತೆರಳಿದ ಚಂದ್ರು 3 ಲಕ್ಷ ತೆಗೆದುಕೊಂಡು ಉಳಿದ 50 ಸಾವಿರ ಸ್ಕೂಟಿಯ ಢಿಕ್ಕಿಯಲ್ಲಿ ಇಟ್ಟಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಕಳ್ಳರು ಹೊಂಚು ಹಾಕಿ ಸೀಟನ್ನ ಬಲವಂತವಾಗಿ ಕಿತ್ತು ಹಣ ಲಪಟಾಯಿಸಿ ಪರಾರಿಯಾಗಿದ್ದಾರೆ. ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.