ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ-2025ರ ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಾಗಿದೆ. ದಸರಾ ಜಂಬೂ ಸವಾರಿ ಮೆರವಣಿಗೆಗಾಗಿ ಗಜಪಡೆ ಆಯ್ಕೆ ಪ್ರಕ್ರಿಯೆ ನಡೆಯಿತು.
ಆನೆಗಳನ್ನ ಕರೆತರಲು ಅರಣ್ಯ ಇಲಾಖೆ ತಪಾಸಣೆ ಆರಂಭಿಸಿದೆ. ಈ ಬಾರಿಯ ದಸರಾ ಮಹೋತ್ಸವ ಸೆ.22ರಿಂದ ಅ.2ರವರೆಗೆ 11 ದಿನಗಳವರೆಗೆ ನಾಡಹಬ್ಬ ನಡೆಯಲಿದೆ. ಅ.2ರಂದು ವಿಜಯದಶಮಿ ಮೆರವಣಿಗೆ ನಡೆಯಲಿದೆ.

ನಗರದ ರಾಜ ಮಾರ್ಗದಲ್ಲಿ ಜಂಬೂ ಸವಾರಿ ಮೆರವಣಿಗೆ ಸಾಗಲಿದೆ. ಜಂಬೂ ಸವಾರಿಗೆ ತಯಾರಿ ನೀಡುವುದಕ್ಕಾಗಿ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಆಗಸ್ಟ್ 4ರಂದು ಮಧ್ಯಾಹ್ನ 12ಕ್ಕೆದಸರಾದ ಮೊದಲ ಕಾರ್ಯಕ್ರಮ ಗಜಪಯಣ ನಡೆಯಲಿದೆ.
ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದೆ. ಆನೆಗಳ ಆಯ್ಕೆಗಾಗಿ ಶಿಬಿರಗಳಲ್ಲಿ ಆನೆಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಪಶು ವೈದ್ಯಾಧಿಕಾರಿಗಳು, ವಲಯ ಅಧಿಕಾರಿಗಳ ತಂಡದಿಂದ ಆನೆ ಆಯ್ಕೆ ಪ್ರಕ್ರಿಯೆ ನಡೆಯಿತು.

