ಮೈಸೂರು : ಖದೀಮರ ಹಾವಳಿ ಮೈಸೂರಿನಲ್ಲಿ ಮುಂದುವರೆದಿದ್ದು, ಪ್ರಾವಿಷನ್ ಸ್ಟೋರ್ನಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದ ಘಟನೆ ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯಲ್ಲಿ ನಡೆದಿದೆ.
ಕಳ್ಳ ಎಂಟ್ರಿ ಕೊಡುತ್ತಿದ್ದಂತೆ ಅಂಗಡಿ ಮಾಲೀಕ ಎಚ್ಚರಗೊಂಡಿದ್ದಾರೆ. ಅಂಗಡಿ ಮಾಲೀಕನನ್ನ ಕಂಡು ಕಳ್ಳ ಬರಿಗೈಲಿ ಓಡಿದ್ದು, ಕಳ್ಳತನಕ್ಕೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮದ ಕೆ.ಆರ್ ನಗರ ಮುಖ್ಯ ರಸ್ತೆಯಲ್ಲಿರುವ ಪ್ರಾವಿಷನ್ ಸ್ಟೋರ್ ನಲ್ಲಿ ಮೊಬೈಲ್ ಬ್ಯಾಟರಿ ಬಳಸಿ ಕಳ್ಳ ಅಂಗಡಿಗೆ ನುಗ್ಗಿದ್ದು, ಅಂಗಡಿ ಮಾಲೀಕನನ್ನ ಕಂಡು ಖದೀಮ ಪರಾರಿಯಾಗಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿದೆ.
ಇತ್ತೀಚೆಗಷ್ಟೇ ಹುಣಸೂರಿನ ಚಿನ್ನದಂಗಡಿಯಲ್ಲಿ ಹಾಡುಹಗಲೇ ದರೋಡೆ ನಡೆಸಲಾಯಿತು. ಕೋಟ್ಯಾಂತರೂ ರೂ ಮೌಲ್ಯದ ಚಿನ್ನಾಭರಣವನ್ನು ಮುಸುಕುಧಾರಿ ಖದೀಮರು ಕದ್ದೋಯ್ದರು. ಮೈಸೂರು ನಗರದಲ್ಲಿ ಬೈಕ್ಗಳನ್ನ ಮುಸುಕುಧಾರಿಗಳು ಕದ್ದೊಯ್ದಿದ್ದಾರೆ.
ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಅಡಿಕೆ ತೋಟದಲ್ಲಿ ಅಡಿಕೆ ಕಳ್ಳತನ ಮತ್ತು ಮೊಬೈಲ್ ಅಂಗಡಿಗೂ ಕನ್ನ ಹಾಕಲಾಗಿದೆ. ನಂಜನಗೂಡಿನಲ್ಲಿ ಹಸುಗಳ ಕಳ್ಳತನ ನಡೆದಿದೆ. ಕಳ್ಳರ ದರೋಡೆಕೋರರ ಕಾಟಕ್ಕೆ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಈ ಎಲ್ಲಾ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

