ಮೈಸೂರು : ಮೃತ ಮರಿಯನ್ನ ಮಡಿಲಿನಲ್ಲಿಟ್ಟು ಕೋತಿಯ ಮೂಕರೋಧನೆಯ ದೃಶ್ಯ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮನಕಲುಕುವಂತಿತ್ತು.

ಮೃತ ಮರಿ ಮಡಿಲಿನಲ್ಲಿಟ್ಟು ಅಸಹಾಯಕತೆಯಿಂದ ತಾಯಿ ಕೋತಿ ಓಡಾಡುತ್ತಿತ್ತು. ಎರಡು ದಿನಗಳ ಹಿಂದೆ ಮರಿ ಕೋತಿ ಮೃತಪಟ್ಟಿತ್ತು. ಎರಡು ದಿನಗಳಿಂದಲೂ ಮೃತ ಕೋತಿ ಇಟ್ಟುಕೊಂಡು ತಾಯಿ ಕೋತಿ ಓಡಾಡುತ್ತಿತ್ತು.

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸೈಕಲ್ ಸ್ಟ್ಯಾಂಡ್‌ನ ಯುವಕ ಯಶ್ವಂತ್‌ ಮೃತ ಕೋತಿಯ ಅಂತ್ಯಕ್ರಿಯೆ ಮಾಡಿದನು. ಮೃತ ಕೋತಿ ಮರಿ ಹೂತುಹಾಕಿ ಯಶ್ವಂತ್ ಮಾನವೀಯತೆ ಮೆರೆದಿದ್ದಾನೆ.