ಮೈಸೂರು: ದಸರಾದಲ್ಲಿ ಕಂಬಳ ಆಯೋಜನೆ ವಿಚಾರವಾಗಿ ಕಂಬಳ ಬೇಡ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಅವರ ಮಾತಿಗೆ ನಮ್ಮ ಸಹಮತವಿದೆ. ಮೈಸೂರು ದಸರಾವನ್ನು ಗುಲ್ಬರ್ಗದಲ್ಲಿ ಮಾಡ್ತೀವಿ ಅಂದ್ರೆ ಹೇಗಿರತ್ತೆ. ಈ ವಿಚಾರದಲ್ಲಿ ಪ್ರತಿಷ್ಠೆ ಬೇಡ. ಡಿಕೆಶಿವಕುಮಾರ್ ಬಂಡತನ ಬಿಟ್ಟು ಜನರ ಮಾತಿಗೆ ಮನ್ನಣೆ ಕೊಡಲಿ ಎಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಕಂಬಳಕ್ಕೆ ನಮ್ಮ ವಿರೋಧವಿಲ್ಲ. ಆದ್ರೆ ಮೈಸೂರಿನ ದಸರಾ ಆಚರಣೆ ವೇಳೆ ಕಂಬಳ ಬೇಡ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕಂಬಳಕ್ಕೆ ಅನುದಾನವನ್ನು ಕೊಟ್ಟಿದ್ರು, ರಾಜ್ಯ ಸರ್ಕಾರ ದಕ್ಷಿಣ ಕನ್ನಡಲ್ಲಿ ಅದ್ದೂರಿ ಕಂಬಳ ಮಾಡಲಿ. ನಮ್ಮ ಸಹಕಾರವು ಇರತ್ತೆ. ಅದನ್ನು ಬಿಟ್ಟು ಬಂಡತನದಿಂದ ಮಾಡೇ ಮಾಡ್ತೀವಿ ಅನ್ನೋದು ಸರಿಯಲ್ಲ ಎಂದರು.