ಮೈಸೂರು: ನಾಡಹಬ್ಬ ದಸರಾ ಉದ್ಘಾಟಕರಾಗಿ ಭಾನು ಮುಸ್ತಾಕ್ ಆಯ್ಕೆ ವಿಚಾರವಾಗಿ ನಾಳೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನಕ್ಕೆ ನಿರ್ಧಾರವಾಗಿದೆ.

ನಾಳೆ ಸಂಜೆ 4 ಗಂಟೆಗೆ ಹಾಸನದಲ್ಲಿರುವ ಭಾನು ಮುಸ್ತಾಕ್ ಸ್ವಗೃಹದಲ್ಲಿ ಆಹ್ವಾನ ನೀಡಲಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು  ಜಿಲ್ಲಾಡಳಿತ ಹೊರಡಿಸಿದೆ.

ಭಾನು ಮುಸ್ತಾಕ್ ಗೆ ಅಧಿಕೃತ  ಜಿಲ್ಲಾಡಳಿತ ಆಹ್ವಾನ ನೀಡಲಿದೆ. ಸರ್ಕಾರದ ಪರವಾಗಿ ಜಿಲ್ಲಾಡಳಿತಂದಿಂದ ನಾಳೆ ಅಧಿಕೃತ ಆಹ್ವಾನಕ್ಕೆ ಸಿದ್ಧತೆ ನಡೆಯುತ್ತಿದೆ.