ಮೈಸೂರು: ಎಗ್ಗಿಲ್ಲದೆ ಮೈಸೂರಿನಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಮೈಸೂರಿಗೆ ಬಂದು ಜೂಜಾಟ ಮಾಡುತ್ತಿದ್ದಾರೆ. ಲಕ್ಷ ಲಕ್ಷ ಹಣ ಹಾಕಿ ಜೂಜಾಟವಾಡುವ ದೃಶ್ಯ ಲಭ್ಯವಾಗಿದೆ.

ರೌಡಿ ಶೀಟರ್ ಗಳಿಂದ ಜೂಜಾಟ ದಂಧೆ ನಡೆಯುತ್ತಿದ್ದು, ಒಂದು ದಿನಕ್ಕೆ 2 ರಿಂದ 3 ಕೋಟಿ ವ್ಯವಹಾರ ನಡೆಸುತ್ತಿದ್ದಾರೆ. ಹಾಡು ಹಗಲೇ ಮೈಸೂರು ತೋಟದ ಹೊರ ವಲಯದಲ್ಲಿ ಜೂಜಾಟ ನಡೆಯುತ್ತಿದೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂಜಾಟವಾಡುವ ದೃಶ್ಯ ಲಭ್ಯವಾಗಿದೆ.

ಡ್ರಗ್ಸ್ ಬಳಿಕ ಮೈಸೂರಿಗೆ ಜೂಜಾಟದ ಕಳಂಕ ಬಂದಿದ್ದು, ರೌಡಿ ಶೀಟರ್ ಮುಜ್ಜು, ಜಯರಾಮ್, ಭಟ್ಟ ರಮೇಶ್ ಇತರರಿಂದ ಇಸ್ಪೀಟ್ ದಂಧೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ತವರಲ್ಲಿ ಅಕ್ರಮಗಳ ಸರಮಾಲೆ ನಡೆಯುತ್ತಿದೆ. ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರಾ ಪೊಲೀಸರು ಎನ್ನುವ ಅನುಮಾನ ಕಾಡುತ್ತಿದೆ.

ಮೈಸೂರು ಹೊರ ವಲಯದಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಹಿಂದೆ ತಿ.ನರಸೀಪುರದ ತ್ರಿವೇಣಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಇಸ್ಪೀಟ್ ದಂಧೆ ನಡೆದಿದ್ದು, ಅಕ್ರಮ ಇಸ್ಪೀಟ್ ದಂಧೆ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇದೀಗ ಮೈಸೂರು ಹೊರ ವಲಯದಲ್ಲಿ ಕೋಟಿ ಕೋಟಿ ಇಸ್ಪೀಟ್ ದಂಧೆ ನಡೆಯುತ್ತಿದೆ.