ನಂಜನಗೂಡು: ಕಬ್ಬಿಣದ ರಾಡು ಮತ್ತು ಡ್ರ್ಯಾಗರ್ ಹಿಡಿದು ಮದ್ಯದಂಗಡಿಯಲ್ಲಿ ನಗದು ದೋಚಿ ಖದೀಮರು ಪರಾರಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.
ತಗಡೂರು ಗ್ರಾಮದ ಸಂತೋಷ್ ವೈನ್ಸ್ ನಲ್ಲಿ ಮೂವರು ಖದೀಮರು ಅಂಗಡಿಯ ಬಾಗಿಲು ಮೀಟಿ ದಾಂಧಲೆ ನಡೆಸಿದ್ದಾರೆ. ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ದೋಚಿ ಸಮೀಪದ ಅಂಗಡಿಯಲ್ಲಿಯೂ ದೋಚಲು ಮುಂದಾಗಿದ್ದರು. ಪೆಟ್ಟಿ ಅಂಗಡಿ ದೋಚಲು ಮುಂದಾದಾಗ ಒಳಭಾಗದಲ್ಲಿ ಮಲಗಿದ್ದ ವ್ಯಕ್ತಿ ನೋಡಿದ್ದಾನೆ.
ಆ ವ್ಯಕ್ತಿಯ ಮೇಲೆ ಮೂವರು ಹಲ್ಲೆ ಮಾಡಲು ಮುಂದಾಗಿದ್ದರು. ಕಳ್ಳರನ್ನು ನೋಡಿ ಚೀರಾಟ ನಡೆಸಿ ಜೀವ ಬದುಕಿಸಿಕೊಂಡಿದ್ದಾನೆ. ಮದ್ಯದ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಸ್ಥಳಕ್ಕೆ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡು ಕಳ್ಳರಿಗೆ ಬಲೆ ಬೀಸಿದ್ದಾರೆ.

