ಮೈಸೂರು : ಅರಮನೆಯಲ್ಲಿ ಭಾರೀ ಅನಾಹುತ ತಪ್ಪಿದೆ. ಅರಮನೆ ಅಂಗಳದಲ್ಲಿ ಗಾಬರಿಯಿಂದ ಪಿರಂಗಿ ಗಾಡಿ ಎಳೆದು ಎತ್ತುಗಳು ದಿಕ್ಕಾಪಾಲಾಗಿ ಓಡಿದೆ.
ಎತ್ತುಗಳನ್ನ ಕಂಟ್ರೋಲ್ ಮಾಡಲಾಗದೆ ಪರದಾಡುವಂತಾಯಿತು. ಬಳಿಕ ವರಹ ಗೇಟ್ ಬಳಿ ಒಳ ನುಗ್ಗಲು ಯತ್ನಿಸಿತು. ಕೊನೆಗೆ ಗೇಟ್ ಒಳಗೆ ನುಗ್ಗಿ ಎತ್ತುಗಳು ನಿಂತಿತು.
ಆಯುಧ ಪೂಜೆ ಹಿನ್ನಲೆ ಪಿರಂಗಿ ಗಾಡಿಗಳನ್ನ ಎಳೆದು ತರಲು ಜೋಡಿ ಎತ್ತುಗಳನ್ನು ಕರೆತರಲಾಗಿತ್ತು. ಅದೃಷ್ಟದಿಂದ ಭಾರೀ ಅನಾಹುತ ತಪ್ಪಿದೆ.

