ಮೈಸೂರು : ಅವಧಿ ಮೀರಿದ ಔಷಧಿ ಸಿಂಪಡಣೆ ಮಾಡಿ ಎರಡುವರೆ ಎಕರೆ ತಂಬಾಕು ಬೆಳೆ ನಾಶವಾಗಿ ರೈತ ಕಂಗಾಲಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಎಂ.ಶೆಟ್ಟಹಳ್ಳಿಯಲ್ಲಿ ನಡೆದಿದೆ.
ರೈತ ಸ್ವಾಮಿ ಜಮೀನಿನಲ್ಲಿ ತಂಬಾಕು ಬೆಳೆದಿದ್ದರು. ಮರಕೂಡು WM ಟ್ರೇಟರ್ ಮಾಲೀಕ ವಾಶಿಮ್ ಎಡವಟ್ಟಿಗೆ ತಂಬಾಕು ಬೆಳೆ ಬಲಿಯಾಗಿದೆ. KANMIDDR ಎಂಬ ಅವಧಿ ಮೀರಿದ ಔಷಧ ನೀಡಿದ್ದಕ್ಕೆ ಬೆಳೆ ನಾಶವಾಗಿದೆ ಎಂದು ಆರೋಪ ಮಾಡಲಾಗಿದೆ.
ಔಷಧ ಅಂಗಡಿಯಲ್ಲಿ ಸರಿಯಾದ ಔಷಧಿ ನೀಡಿರೋದೆ ಘಟನೆಗೆ ಕಾರಣ ಅನ್ನೋ ಆರೋಪ ಕೇಳಿಬಂದಿದ್ದು, ಕೃಷಿ ಇಲಾಖೆ ಅಧಿಕಾರಿ ಮಹೇಶ್, ಅಂಗಡಿ ಮಾಲೀಕನ ವಿರುದ್ಧ ರೈತರ ಆಕ್ರೋಶ ಹೊರಹಾಕಿದ್ದಾರೆ. ಔಷಧ ಸಿಂಪಡಣೆಯಿಂದನೇ ತಂಬಾಕು ಗಿಳಗಡಿಗೆ ಕುತ್ತು ಬಂದಿದೆ ಅನ್ನೋ ಆರೋಪ ಮಾಡಲಾಗಿದೆ. ಸ್ಥಳಕ್ಕೆ ಬಾರದ ಕೃಷಿ ಅಧಿಕಾರಿ ವಿರುದ್ಧ ರೈತರು ಸಿಟ್ಟಾಗಿದ್ದಾರೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.

