ಮೈಸೂರು: ಒಂದೊಂದಾಗಿ  ಕಲ್ಲು ಕಂಬಗಳ ಬ್ಯಾರಿಕೇಟ್ ಮುರಿದು ಬೀಳುತ್ತಿದ್ದು, ಸಾಂಸ್ಕೃತಿಕ ನಗರಿ ಅಂದ ಹೆಚ್ಚಿಸಲು ರಾಜಪಥಗಳಲ್ಲಿ ಅಲಂಕಾರಿಕ ಕಲ್ಲಿನ ಕಂಬಗಳು ನಿರ್ಮಿಸಿದ್ದರು. ವಾಹನ ಸವಾರರ ನಿರ್ಲಕ್ಷ್ಯ,ಕಂಬಗಳಿಗೆ ಡಿಕ್ಕಿ ಹೊಡೆದು ಕಲ್ಲಿನಿಂದ ಮಾಡಿದ ಗ್ರಿಲ್ ಗಳು ಒಂದೊಂದಾಗಿ ಬೀಳುತ್ತಿದೆ.

ಮೈಸೂರು ಅರಮನೆ ಸುತ್ತಲು ಮತ್ತು ರಾಜಪಥದುದ್ದಕ್ಕೂ  ಗ್ರಾನೈಟ್ ಕಲ್ಲು ಕಂಬಗಳು ನಿರ್ಮಿಸಿದ್ದರು. ಸೂಕ್ತ ರಕ್ಷಣೆ ಇಲ್ಲದೆ ಹಾಳಾಗುತ್ತಿವೆ. ಆಗಾಗ್ಗೆ ಬಸ್, ಕಾರು,ಗೂಡ್ಸ್ ವಾಹನಗಳು ಡಿಕ್ಕಿ ಹೊಡೆಯುತ್ತದೆ.

ಮೈಸೂರಿನ ಅಂದಕ್ಕೆ ಕಲ್ಲಿನ‌‌ ಕಂಬಳ ಬ್ಯಾರಿಕೇಟ್ ಮತ್ತಷ್ಟು ಮೆರಗು ನೀಡುತ್ತಿದ್ದರು.  ಪಾದಚಾರಿಗಳು ಓಡಾಡುವ ಜಾಗದಿಂದ ಮುಖ್ಯರಸ್ತೆಗೆ ಬಾರದಂತೆ  ಗ್ರಿಲ್  ಅಳವಡಿಸಿದ್ದರು. ನರ್ಮ್ ಯೋಜನೆ ಅಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿತ್ತು.

ಸಾರ್ವಜನಿಕರ ನಿರ್ಲಕ್ಷ್ಯದಿಂದ ಗ್ರಿಲ್ ಗಳಿಗಿಲ್ಲ ರಕ್ಷಣೆ ಇಲ್ಲದಂತಾಗಿದೆ. ಇನ್ನಾದರು ಸಂಬಂಧಪಟ್ಟವರು ಸೂಕ್ತ ಕ್ರಮವಹಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.