ಮೈಸೂರು: ಮನೆಗಳ್ಳರಿಗೆ ಸಾಥ್ ನೀಡಿದ್ದ ಮೈಸೂರಿನ ಅಶೋಕಪುರಂ ಠಾಣೆ ಹೆಡ್​ಕಾನ್ಸ್​ಟೇಬಲ್ ರಾಜು ಎಂಬಾತನನ್ನು ಬಂಧಿಸಿರುವ ಘಟನೆ ನಡೆದಿದೆ.

ಕದ್ದ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮೈಸೂರಿನ ಮಂಡಿ ಠಾಣೆ ಪೊಲೀಸರು ಹೆಡ್​ಕಾನ್ಸ್​ಟೇಬಲ್ ರಾಜು ಸೇರಿದಂತೆ ಕಳ್ಳರಾದ ನಜರುಲ್ಲಾ ಬಾಬು ಹಾಗೂ ಅಲೀಂ ಎಂಬ ಮೂವರನ್ನು ಅರೆಸ್ಟ್​ ಮಾಡಲಾಗಿದೆ.

ಮೈಸೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳವು ಮಾಡಿದ್ದ ನಜರುಲ್ಲಾ ಬಾಬು, ಅಲೀಂ. ಸುಮಾರು 400 ಗ್ರಾಂ ಚಿನ್ನಾಭರಣ ಕದ್ದಿದ್ದರು. ಜೊತೆಗೆ ಕದ್ದಿದ್ದ 400 ಗ್ರಾಂ ಚಿನ್ನದಲ್ಲಿ 300 ಗ್ರಾಂನ್ನು ಹೆಚ್​ಸಿ ರಾಜುಗೆ ನೀಡಿದ್ದರು.

ಉಳಿದ 100 ಗ್ರಾಂ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಬಳಿಕ ನಜರುಲ್ಲಾ ಬಾಬು, ಅಲೀಂನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹೆಡ್​ಕಾನ್ಸ್​ಟೇಬಲ್ ರಾಜು ಬಗ್ಗೆ ಕಳ್ಳರು ಬಾಯ್ಬಿಟ್ಟಿದ್ದು, ಈ ಹಿನ್ನಲೆ ಅಶೋಕಪುರಂ ಠಾಣೆ ಹೆಡ್​ಕಾನ್ಸ್​ಟೇಬಲ್ ರಾಜು ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.