ಮೈಸೂರು : ಮಿನಿ ಲಾರಿ ಮತ್ತು ಬೈಕ್ ಗಳ ನಡುವೆ ಭೀಕರ ರಸ್ತೆ ಅಪಘಾತ ಪಿರಿಯಾಪಟ್ಟಣ ತಾಲೂಕು ಗೊರಹಳ್ಳಿ ಕೆರೆ ಏರಿಯಾದಲ್ಲಿ ನಡೆದಿದೆ. ಇಬ್ಬರ ಯುವಕರ ಸಾವು, ಒಬ್ಬನ ಕತ್ತು ಸಂಪೂರ್ಣ ನಾಶವಾಗಿದೆ.

ಪಿರಿಯಾಪಟ್ಟಣ ತಾಲೂಕಿನ ಹಿಟ್ನಿ ಹೆಬ್ಬಾಲು ಗ್ರಾಮದ ಯುವಕರು. ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಇಬ್ಬರ ಮೃತ ದೇಹ ರವಾನೆ ಮಾಡಲಾಗಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.