ಮೈಸೂರು: ಶುದ್ದ ನೀರಿನ ಘಟಕದಿಂದ ಸಂಗ್ರಹಗೊಂಡ ಹಣ ದುರ್ಬಳಕೆ ಮಾಡಿಕೊಂಡ ಗ್ರಾ.ಪಂ. ನೌಕರನನ್ನ ಸೇವೆಯಿಂದ ವಜಾ ಮಾಡಲಾಗಿದೆ.
ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಗ್ರಾ.ಪಂ.ನಲ್ಲಿ ಹಂಗಾಮಿ ನೀರುಗಂಟಿ ಕೆಲಸ ಮಾಡುತ್ತಿದ್ದ ಮಂಜುನಾಥ್ ವಜಾ ಆದ ನೌಕರ. ಹಣ ದುರ್ಬಳಕೆ ಕುರಿತು ಪಂಚಾಯಿತಿ ಪಿಡಿಓಗೆ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಭೀಮಪುತ್ರ ಪ್ರಸನ್ನರವರು ದಾಖಲೆ ಸಹಿತ ಆರೋಪ ಮಾಡಿದ್ದರು.

ಮಂಜುನಾಥ್ ವಿರುದ್ಧ ಪಿಡಿಓ ಗಿರೀಶ್ ಕ್ರಿಮಿನಲ್ ಕೇಸ್ ದಾಖಲಿಸಿದ್ದರು. ಈ ಹಿನ್ನಲೆ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

