ಮೈಸೂರು: ಹುಚ್ಚುನಾಯಿ ಕಡಿದು ಅನಾರೋಗ್ಯಕ್ಕೆ ಸಿಲುಕಿದ್ದ ಮೇಟಗಳ್ಳಿ ಮಹಾಲಿಂಗೇಶ್ವರ ದೇವಾಲಯದ ಬಸವ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ನಿನ್ನೆ ಮೃತಪಟ್ಟಿದೆ.
ಕೆಲವು ದಿನಗಳ ಹಿಂದೆ ಹುಚ್ಚುನಾಯಿ ಕಡಿದಿತ್ತು. ನಂತರ ನಾಯಿಯಂತೆ ಶಬ್ಧಮಾಡುತ್ತಾ ಸ್ಥಳೀಯರಿಗೆ ಭೀತಿ ಸೃಷ್ಟಿಸಿತ್ತು. ಗ್ರಾಮದ ಬಸವನಿಗೆ ಸ್ಥಳೀಯರು ಕಟ್ಟಿಹಾಕಿ ಚಿಕಿತ್ಸೆ ಕೊಡಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಮೃತಪಟ್ಟ ಬಸವನನ್ನು ಮಹಾಲಿಂಗೇಶ್ವರ ದೇವಾಲಯದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿತು.

