ಮೈಸೂರು: ಮಲೆ ಮಹದೇಶ್ವರ ವನ್ಯ ಜೀವಿ ಅರಣ್ಯದಲ್ಲಿ ಆರು ಹುಲಿಗಳ ಸಾವಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಗಸ್ತ್ ಎಂಬ ಪ್ರದೇಶದಲ್ಲಿ ವಿಷಪ್ರಾಶನ ಮಾಡಿ ರಾಷ್ಟ್ರೀಯ ಪ್ರಾಣಿಯಾಗಿರುವ ಐದು ಹುಲಿಗಳ ಸಾವಿಗೆ ಕಾರಣವಾಗಿದ್ದರು. ಆದರೆ, ಈಗ ಮತ್ತೊಂದು ಹುಲಿ ಸಾವಿಗಿಡಗಿದ್ದು ಒಟ್ಟು ಆರು ಹುಲಿಗಳು ಸಾವಿಗಿಡಗಿದೆ.
ಇಂತಹಾ ಹೀನಾ ಕೃತ್ಯ ಎಸಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅರಣ್ಯ ಇಲಾಖೆಯ ಸಚಿವರಾದ ಈಶ್ವರ ಖಂಡ್ರೆ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿರುವ ಪರಿಣಾಮ ಮೂವರನ್ನು ಬಂಧಿಸಿರುವುದು ಒಳ್ಳೆಯ ಬೆಳವಣಿಗೆ. ಹುಲಿಯನ್ನು ಕೊಂದವರಿಗೆ ನಮ್ಮ ದೇಶದಲ್ಲಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬೇಕೆಂದು ಕಾನೂನು ಇದೆ, ಆದರೆ ಆರು ಹುಲಿಗಳ ಸಾವಿಗೆ ಕಾರಣವಾದ ವರಿಗೆ ಗಲ್ಲು ಶಿಕ್ಷೆಗೆ ಒಳಪಡಿಸುವುದು ಸೂಕ್ತ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

