ತಿ. ನರಸೀಪುರ: ಪಟ್ಟಣದ ಖಾಸಗಿ ಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಸಂಸದ ಸುನಿಲ್ ಬೋಸ್ ಉದ್ಘಾಟನೆ ಮಾಡಿದರು.
ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ಸಂಸದ ಸುನಿಲ್ ಬೋಸ್ ಪಾಠ ಮಾಡಿದರು. ಈ ವೇಳೆ ವಿಶೇಷ ಚೇತನರಿಗೆ ಪರಿಕರ ವಿತರಣೆ ಮತ್ತು ನಿವೃತ್ತ ಶಿಕ್ಷಕರು ಹಾಗೂ ಸಾಧನೆಗೈದ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಮೂರ್ತಿ, ಖಜಾಂಚಿ ನಾಗೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

