ಮೈಸೂರು: ಹೆಚ್.ಡಿ. ಕೋಟೆ ತಾಲ್ಲೂಕಿನಾದ್ಯಂತ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾರಕ ಜಲಾಶಯ ಭರ್ತಿ ಆಗಲು ಐದು ಅಡಿ ಬಾಕಿ ಇದೆ.
ತಾಲೂಕಿನ ರೈತರ ಜೀವನದಿಯಾದ ತಾರಕ ಜಲಾಶಯವು 125 ಅಡಿ ಇದ್ದು, 3.95 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ. ಇದಕ್ಕೆ ಸುಮಾರು 18 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶವಿದೆ. 120 ಅಡಿ ತಲುಪಿದ್ದು, ಜಲಾಶಯಕ್ಕೆ 300 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ತಾಲ್ಲೂಕಿನ ಕಬಿನಿ, ನುಗು ಜಲಾಶಯಗಳು ಹದಿನೈದು ದಿನಗಳ ಹಿಂದೆಯೆ ಭರ್ತಿಯಾಗಿದ್ದರೆ,
ತಾರಕ ಜಲಾಶಯ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಿಂದ ಜಲಾಶಯ ತುಂಬಿರಲಿಲ್ಲ. ಇದರಿಂದ ರೈತರು ಆತಂಕದಲ್ಲಿದ್ದರು. ಕಳೆದ ಮೂರು ದಿನಗಳಿಂದ ತಾಲೂಕು ಸೇರಿದಂತೆ ನಾಗರಹೊಳೆ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಜಲಾಶಯ ಭರ್ತಿ ಹಂತ ತಲುಪಿದೆ.

