ಹುಣಸೂರು: ವಿದ್ಯಾರ್ಥಿನಿಯೊಬ್ಬಳು ಶ್ರೀ ರಾಮ ರಕ್ಷಾ ಸ್ತೋತ್ರ ವನ್ನು ಕೇವಲ ಮೂರು ನಿಮಿಷ ಆರು ಸೆಕೆಂಡ್ 59 ಮಿಲಿ ಸೆಕೆಂಡ್ ಗಳಲ್ಲಿ ಪ್ರಸ್ತುತ ಪಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸುವ ಮೂಲಕ ಗಮನಸೆಳೆದಿದ್ದಾಳೆ.

ಹುಣಸೂರು ನಗರದ ಮಾರುತಿ ಬಡಾವಣೆಯ ನಿವಾಸಿ ಹೆಚ್.ಎನ್.ವೆಂಕಟೇಶ್ ಹಾಗೂ ಎಸ್.ಪಿ.ಸಂಧ್ಯಾ ದಂಪತಿ ಪುತ್ರಿ ಹುಣಸೂರು ಖಾಸಗಿ ವಿದ್ಯಾ ಸಂಸ್ಥೆಯಲ್ಲಿ 8ನೇ ತರಗತಿ ಓದುತ್ತಿರುವ ಕುಮಾರಿ ಪುಣ್ಯ ವಿ ದಾಖಲೆ ಮಾಡಿದ ವಿದ್ಯಾರ್ಥಿನಿ. ಈಕೆ ಹದಿಹರೆಯದ ವರ್ಗ (Teen categary) ದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಾಲಿಸಿದ್ದು, ಈಕೆಯ ಸಾಧನೆಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದಿರುವ ಶಾಸಕ ಜಿ.ಡಿ.ಹರೀಶ್ ಗೌಡರು ತಾಲೂಕು ಆಡಳಿತದಿಂದ ಆಚರಿಸುವ ಗಣರಾಜ್ಯೋತ್ಸವದಂದು ಯುವ ಪ್ರತಿಭೆ ಪುಣ್ಯಳನ್ನು ಅಭಿನಂದಿಸಲು ಸೂಚಿಸಿದ್ದಾರೆ. ಹಾಗೆಯೇ ಮಾಜಿ ಶಾಸಕ ಹೆಚ್.ಪಿ .ಮಂಜುನಾಥ್ ರವರು ವಿಷಯ ತಿಳಿದು ವಿದ್ಯಾರ್ಥಿ ಪುಣ್ಯ ವಿ. ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.