ಮೈಸೂರು : ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಾಗಾಪುರ ಆಶ್ರಮ ಶಾಲೆಯಲ್ಲಿ ನಡೆದಿದೆ.

ಶಾಲಾ ಆವರಣದಲ್ಲಿ ತಲೆ ಸುತ್ತು ಬಂದು ವಿದ್ಯಾರ್ಥಿ ಅಸ್ವಸ್ಥಗೊಂಡು ಬಿದ್ದಿದ್ದನು. ತಾಲ್ಲೂಕಿನ ಕಲ್ಲೂರಪ್ಪನ ಬೆಟ್ಟದ ಶಂಕರಪುರ ಹಾಡಿ ನಿವಾಸಿಗಳಾದ ಜಗನ್ನಾಥ್ ಮತ್ತು ಲಕ್ಷ್ಮಿ ದಂಪತಿ ಪುತ್ರ ಸೂರ್ಯ (14) ಮೃತ ದುರ್ದೈವಿ.

ಮೊನ್ನೆ ಶಾಲಾ ಆವರಣದಲ್ಲಿ ತಲೆ ಸುತ್ತಿನಿಂದ ಸೂರ್ಯ ಅಸ್ವಸ್ಥಗೊಂಡಿದ್ದನು. ಚಿಕಿತ್ಸೆಗಾಗಿ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಶಿಕ್ಷಕರು ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮೆದುಳಿನ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಸೂರ್ಯ ಸಾವನ್ನಪ್ಪಿದ್ದಾನೆ.