ಮೈಸೂರು: ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕೂಗು ಮಾರಿಗಳು ಇದ್ದರು. ಅದರಲ್ಲಿ ಪ್ರಿಯಾಂಕಾ ಖರ್ಗೆಗೆ ಸಚಿವ ಸ್ಥಾನ ಸಿಕ್ಕಿದೆ. ಸಂತೋಷ್ ಲಾಡ್ ಗೆ ಸಿಕ್ಕಿಲ್ಲ‌. ಅವರಿಗೆ ಸಿಕ್ಕರೇ ಮತ್ತೆ ಇದೇ ರೀತಿ ಕೂಗು ಮಾರಿ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಇವರ ಸರ್ಕಾರ ಬಂದು ಒಂದು ತಿಂಗಳು ಕಳೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇನ್ನಾದರೂ ಗೃಹ ಮಂತ್ರಿಗಳು ಕಾನೂನು ಸುವವಸ್ಥೆ ಬಗ್ಗೆ ಮಾತನಾಡಲಿ. ಮದ್ದೂರು ಬಳಿ ರೋಡ್ ರೇಜ್ ಪ್ರಕರಣ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಮೈಸೂರಿಗೆ ಕಾರ್ಯಕ್ರಮಕ್ಕೆ ಕುಟುಂಬದವರ ಜೊತೆ ಬಂದು ವಾಪಸ್ಸು ಬೆಂಗಳೂರಿಗೆ ಹೋಗುತ್ತಿದ್ದ ಸಾಗರ್ ಮೇಲೆ ಹಲ್ಲೆ ನಡೆದಿದೆ. ಮಹಿಳೆಯರು ಮಕ್ಕಳು ಇರುವ ಕಾರ್ ಮೇಲೆ ಪೈಶಾಚಿಕವಾಗಿ ಹಲ್ಲೆ ನಡೆಸಿದ್ದಾರೆ. ಸಾಗರ್ ನ ತಲೆ ಭಾಗಕ್ಕೆ ಹೆಚ್ಚಿನ ಹಲ್ಲೆಯಾಗಿದೆ.ಆದರೆ ಮಂಡ್ಯ ಎಸ್ ಪಿ ಶೋಭಾರಾಣಿ ಅವರು ಇದನ್ನು ಸಾಮಾನ್ಯ ಪ್ರಕರಣ ಅಂತ ಕೇಸ್ ದಾಖಲು ಮಾಡಿದ್ದಾರೆ. ಈ ಘಟನೆಯಿಂದ ಬೆಂಗಳೂರು ಮೈಸೂರು ಮಧ್ಯೆ ಓಡಾಟ ಮಾಡುವುವರಿಗೆ ಭಯದ ವಾತವರಣ ಸೃಷ್ಟಿಯಾಗಿದೆ. ಆ ಗಲಾಟೆಯ ದೃಶ್ಯ ನೋಡಿದ್ದರೆ ಅದು ಸಹಜ ಅನಿಸುವುದೇ. ಪೊಲೀಸರಿಗೆ ಅಷ್ಟು ಬುದ್ದಿ ಇಲ್ಲವೇ.

ಮೊನ್ನೆ ಗಾಳಿಯಲ್ಲಿ ಗುಂಡು ಹರಿಸಿದ್ರೆ ಫನ್ ಗಾಗಿ ಅಂತ ಹೇಳುತ್ತಾರೆ.ಹಲ್ಲೆ ಮಾಡಿದವರು ವಾರದ ಒಳಗೆ ಬೇಲ್ ತೆಗೆದುಕೊಂಡು‌ ಹೊರಗೆ ಬಂದಿದ್ದಾರೆ. ಪೊಲೀಸರು ಈ ಘಟನೆಗೆ ಮತ್ತೆ ಕೋರ್ಟ್ ಅನುಮತಿ ತೆಗೆದುಕೊಂಡು 307 ಎಫ್ಐಅರ್ ಮಾಡಲಿಲ್ಲ ಎಂದರೇ ನಾವು ಸುಮ್ಮನೆ ಇರುವುದಿಲ್ಲ. ರಾಜ್ಯದಲ್ಲಿ ಎಲ್ಲೇ ಈ ರೀತಿ ಅಕಸ್ಮಾತ್ ಕಾರ್ ಗಳು ಟಚ್ ಅದ್ರೆ ಅದಕ್ಕೆ ಇನ್ಶುರೆನ್ಸ್ ಇದೆ ಅದನ್ನು ಬಿಟ್ಟು ಈ ರೀತಿ ಹಲ್ಲೆ ಮಾಡಬಾರದು. ಪೊಲೀಸ್ ಅಯ್ತುಕರು ಈ ರೀತಿ ಘಟನೆಯಲ್ಲಿ ಸರಿಯಾದ ರೀತಿ ಕೇಸ್ ದಾಖಲು ಮಾಡಬೇಕು. ಈ ಪ್ರಕರಣದಲ್ಲಿ 307 ಕೇಸ್ ದಾಖಲು ಮಾಡದೇ ಇದ್ದರೆ ಐಜಿ ಅವರನ್ನು ಭೇಟಿ ಮಾಡಿ ದೂರು ಕೊಡಬೇಕಾಗುತ್ತದೆ ಎಂದರು.