ತಿ.ನರಸೀಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಕಾಶಿಗಿಂತಲೂ ಗುಲಗಂಜಿ ತೂಕದಷ್ಟು ಪುಣ್ಯ ಕ್ಷೇತ್ರವಾಗಿರುವ ತಿರಮಕೂಡಲು ನರಸೀಪುರದ ಶ್ರೀ ಮಹಾಲಕ್ಷ್ಮಿ ಸಮೇತ ಶ್ರೀ ಗುಂಜಾನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಇದೇ ಏಪ್ರಿಲ್ 12 ರಂದು ಶನಿವಾರ ವಿಜೃಂಭಣೆಯಿಂದ ಜರುಗಲಿದೆ.

ಕೆಬ್ಬೆ,ಆಲಗೂಡು, ಗೋಪಾಲಪುರ, ವ್ಯಾಸರಾಜಪುರ, ತಿ.ನರಸಿಪುರ ಪಟ್ಟಣದ ಯಜಮಾನರನ್ನು ಸೇರಿದಂತೆ ಅಧಿಕಾರಿಗಳ ಸಮ್ಮುಖದಲ್ಲಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರಗಲಿದೆ. ಎ 12 ರಂದು ಮೀನ ಶುದ್ಧ ಪೌರ್ಣಮಿ ಶನಿವಾರ 12.23 ರಿಂದ 12.53 ಸಮಯದ ಅಭಿಜಿನ್ ಮುಹೂರ್ತದಲ್ಲಿ ರಥಸ್ಥಂ ಕೇಶವಂ ದೃಷ್ಟಾ ಪುನರ್ಜನ್ಮನವಿದ್ಯತೇ ಎಂಬ ಮಯ್ಯಾದೆಯಿಂದ ದಿವ್ಯ ಮಹಾರಥೋತ್ಸವ ಜರುಗಲಿದೆ

ಇತಿಹಾಸ ಪ್ರಸಿದ್ಧಿ ಶ್ರೀ ಗುಂಜನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಬ್ರಹ್ಮರಥೋತ್ಸವ ಇದೆ ತಿಂಗಳು 12 ರಂದು ವಿಜೃಂಭಣೆಯಿಂದ ನೆರವೇರಲಿದೆ. ರಥೋತ್ಸವದ ಸಕಲ ಸಿದ್ಧತೆಗಳು ನಡೆದಿದೆ.

ಯಜಮಾನರು, ಪೂರ್ವ ಪ್ರಮುಖರು, ಸಾರ್ವಜನಿಕರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಗುಂಜಾ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಯಶಸ್ವಿಗೊಳಿಸಬೇಕು. ಶಾಂತಿ ಮತ್ತು ಶಿಸ್ತಿನ ಸೌಹಾರ್ದತೆಯಿಂದ ರಥೋತ್ಸವ ನಡೆಯಲು ಸಹಕರಿಸಬೇಕೆಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಹೇಳಿದರು.