ಮೈಸೂರು: ಲೋಕಾಯುಕ್ತ ವರದಿ ತಿರಸ್ಕರಿಸಿ ಎಂದು ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಇಡಿ ಅರ್ಜಿ ವಿಚಾರವಾಗಿ ಮೈಸೂರಿನಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಇಡಿ ತಕರಾರು ಅರ್ಜಿ ಸಲ್ಲಿಸಿದೆ. ನಾನು ಕೂಡ ಲೋಕಾಯುಕ್ತ ವರದಿ ವಿರುದ್ದ ಹಲವು ಸಾಕ್ಷಿಯೊಂದಿಗೆ ವಾದ ಮಂಡಿಸಿದ್ದೆ. ಅದರ ಆದೇಶ ನಾಳೆ ಬರಲಿದೆ. ಈ ನಡುವೆ ಇಡಿ ಕೂಡ ತಕರಾರು ಅರ್ಜಿ ಸಲ್ಲಿಸಿದೆ.

ತನಿಖೆ ವೇಳೆ ಹಲವು ಸಾಕ್ಷಿ ಲಭ್ಯವಿತ್ತು ಎಂಬುದಾಗಿ ಉಲ್ಲೇಖಿಸಿದೆ. ಮಾನ್ಯ ನ್ಯಾಯಲಯ ಇದೆಲ್ಲವನ್ನು ಪರಿಗಣಿಸಿ ಲೊಕಾಯುಕ್ತ ವರದಿ ತಿರಸ್ಕರಿಸಲಿದೆ ಎಂಬ ನಿರೀಕ್ಷೆ ಇದೆ. ನನಗೆ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕಾನೂನಾತ್ಮಕ ಅವಕಾಶ ನೀಡಲಿದೆ ಎಂದು ಮೈಸೂರಿನಲ್ಲಿ ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.