ಮೈಸೂರು: ಮುಡಾ 50:50 ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಸ್ನೇಹಮಯಿ ಕೃಷ್ಣ ಕಿಡಿಕಾರಿದ್ದಾರೆ. ಜಾಲತಾಣದಲ್ಲಿ ಸಿಎಂ ಎಕ್ಸ್ ಖಾತೆಯ ಪೋಸ್ಟ್ ಉಲ್ಲೇಖಿಸಿ ಕಿಡಿಕಾರಿದ್ದು, ಮುಡಾ ದಾಖಲೆಗೆ ವೈಟ್ನಾರ್ ವಿಚಾರಕ್ಕೆ ಸಿಎಂ ಪೋಸ್ಟ್ ಮಾಡಿದ್ದಾರೆ.

ದೇವನೂರು ಮೂರನೇ ಹಂತದಲ್ಲಿ ನಿವೇಶನ ಖಾಲಿ ಇಲ್ಲದ ಕಾರಣ ನನ್ನ ಶ್ರೀಮತಿ ಸಮಾಂತರ ಬಡಾವಣೆಯಲ್ಲಿ ಸೈಟ್ ಕೇಳಿದ್ದಾರೆ ಎಂದು ಸಿಎಂ ಪೋಸ್ಟ್ ಹಾಕಿದ್ದರು. ದೇವನೂರು ಬಡಾವಣೆಯಲ್ಲಿ ಇನ್ನೂ 370 ನಿವೇಶನಗಳು ಬಾಕಿ ಇವೆ ಎಂದು ಮುಡಾ ದಾಖಲೆ ಹೇಳಿದೆ. ಯಾರು ಸುಳ್ಳು ಹೇಳುತ್ತಿದ್ದಾರೆ ಅಂತ ರಾಜ್ಯದ ಜನ ಗಮನಿಸಬೇಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಮಯಿ ಕೃಷ್ಣ ಪೋಸ್ಟ್ ಹಾಕಿದ್ದಾರೆ.

