ಮೈಸೂರು: ಸೋದರ ಮಾವನೇ ಅಳಿಯನಿಗೆ ಸ್ಕೆಚ್ ಮಾಡಿದ್ದು, ಸುಪಾರಿ ಪಡೆದು ಕೊಲೆ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧನ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು. ಘಟನೆಗೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ.

ರಾಜು (57), ಮೀರ್ ಹುಸೇನ್ , ನಯಾಜ್ ಅಹ್ಮದ್ (43), ಹಬೀದ್ ಪಾಷ (43), ಅಯಾಜ್ ಪಾಷಾ(28), ಅಮೀನುಲ್ಲಾ(35). ಕಳೆದ ತಿಂಗಳು ಪಿರಿಯಾಪಟ್ಟಣದ ಪ್ರವೀಣ್ ಎಂಬಾತನ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ.

ಪಲ್ಸರ್ ಬೈಕಿನಲ್ಲಿ ಮುಖಕ್ಕೆ ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಿ ಮಾರಕಾಸ್ತ್ರಗಳಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಪ್ರವೀಣ್ ಸೋದರಮಾವ ರಾಜುವಿನಿಂದಲೇ ಕೊಲೆಗೆ ಸುಪಾರಿ ನೀಡಿದ್ದಾರೆ.
ಆಸ್ತಿ ವಿಚಾರವಾಗಿ ಪ್ರವೀಣ್ ತಾಯಿ ಹಾಗೂ ಸೋದರಮಾವ ರಾಜು ಮಧ್ಯೆ ಮನಃಸ್ತಾಪ ಉಂಟಾಗಿತ್ತು.

ಇದೇ ವಿಷಯವಾಗಿ ಪ್ರವೀಣ್ ನನ್ನು ರಾಜು ಹತ್ಯೆ ಮಾಡಿಸಲು ಮುಂದಾಗಿದ್ದರು. ಕೊಲೆಗೆ ಪ್ರೊಫೆಷನಲ್ ರೌಡಿಗಳ ಮೊರೆ ಹೋಗಿದ್ದರು. ಪಿರಿಯಾಪಟ್ಟಣದ ಮೀರ್ ಹುಸೇನ್ ಅಲಿ ಮೂಲಕ ರೌಡಿಗಳ ಪರಿಚಯಿಸಿ, ಸುಪಾರಿಗೆ ಹಣ‌ ಪಡೆದು ಏಪ್ರಿಲ್ 21ರಂದು ಪ್ರವೀಣ್ ಮೇಲೆ ಹತ್ಯೆಗೆಆಯಾಜ್ ಪಾಷಾ ಮತ್ತು ಹಬೀದ್ ಪಾಷಾ ಯತ್ನಿಸಿದ್ದರು. ಈ ಹಿಂದೆ ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಹಾಗೂ ಕ್ಯಾತಮಾರನಹಳ್ಳಿ ರಾಜು ಹತ್ಯೆ ಪ್ರಕರಣಗಳಲ್ಲಿ ಹಬೀದ್ ಪಾಷ ಭಾಗಿಯಾಗಿದ್ದರು.