ಮೈಸೂರು :ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಮೈಸೂರಿನ ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಸಿದರು. ಸ್ಥಳೀಯ ಶಾಸಕರು, ಮುಖಂಡರ ಸಾಥ್ ನೀಡಿದರು.
ಮತ ಖರೀದಿಯಿಂದ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ರು ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ನನಗೆ ಗೊತ್ತಿಲ್ಲ. ಇಬ್ರಾಹಿಂ ನಮ್ಮ ಪಕ್ಷದಲ್ಲಿ ಇಲ್ಲ. ಆ ಸಂದರ್ಭದಲ್ಲಿ ಇಬ್ರಾಹಿಂ ನನ್ನ ಪರವಾಗಿ ಕೆಲಸ ಮಾಡಿದ್ರು. ಮತ ಖರೀದಿ ಮಾಡಿದ್ರು ಎಂಬುದು ನನಗೆ ಹೊಸ ವಿಚಾರ ಎಂದರು.
ಈ ಬಗ್ಗೆ ನಾನು ಕೇಳೆ ಇರಲಿಲ್ಲ. ನಾನು ಬಾದಾಮಿಗೆ ಹೋಗಿದ್ದು ಎರೆಡು ದಿನ ಮಾತ್ರ. ನಮಗೆ ಗೊತ್ತಿಲ್ಲದೆ ಖರೀದಿಯಾಗಿದ್ಯಾ ಎಂಬ ಪ್ರಶ್ನೆಗೆ. ಆ ವಿಚಾರ ಗೊತ್ತಿಲ್ಲ ಎಂದ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದರು.

