ನಂಜನಗೂಡು: ಹದಿನಾರು ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಸಂಸದ ಸುನೀಲ್ ಬೋಸ್ ಮಾತನಾಡಿ, ವರುಣ ಕ್ಷೇತ್ರದ ಜನರು ಅದೃಷ್ಟವಂತರಾಗಿದ್ದಾರೆ. ವಿರೋಧ ಪಕ್ಷ ಬಿಜೆಪಿಯವರು ಬೊಕ್ಕಸ ಖಾಲಿಯಾಗಿದೆ ಎಂದು ಟೀಕಿಸುತ್ತಾರೆ.
ಬೊಕ್ಕಸ ಖಾಲಿಯಾಗಿದ್ರೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಹದಿನಾರು ಗ್ರಾಮವನ್ನು ಯದುನಾಡು ಎಂದು ನಾಮಕರಣ ಮಾಡಬೇಕು. ಸಿದ್ದರಾಮಯ್ಯ ರವರೇ ಐದು ವರ್ಷಗಳ ಕಾಲ ಸಿಎಂ ಆಗಿರಬೇಕು ಎಂದರು.

