ಮೈಸೂರು: ದಲಿತರು ಸಿಎಂ ಆಗಬೇಕಾದ ಸಮಯದಲ್ಲಿ ದಲಿತರಿಗೆ ಸಮಾಧಿ ಕಟ್ಟಿ ಸಿದ್ದರಾಮಯ್ಯ ಸಿಎಂ ಆದ್ರು, ಈಗಲಾದರೂ ದಲಿತರ ಪರ ಸಿಎಂ ದ್ವನಿ ಎತ್ತಿಲ್ಲ. ಪರಮೇಶ್ವರ್ ಅವರನ್ನು ಸೋಲಿಸಿದರು. 2028 ಬಿಜೆಪಿ ಅಧಿಕಾರಕ್ಕೆ ಬಂದ್ರೆ ದಲಿತರನ್ನು ಸಿಎಂ ಮಾಡ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಛಲವಾದಿ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿದರು.

ನಮ್ಮ ಪಕ್ಷದಲ್ಲಿ ಕೇಳದೆ ಎಲ್ಲವನ್ನೂ ಕೊಡ್ತಾರೆ. ದಲಿತರು ಸಿಎಂ ಆಗ್ಬೇಕು ಅಂತ ಕೇಳೋದಿಲ್ಲ. ದಲಿತರು ಸಿಎಂ ಆದ್ರೆ ಅದು ಬಿಜೆಪಿ ಯಲ್ಲಿ ಮಾತ್ರ. ಪವಾಡ ಎಲ್ಲವೂ ನಮ್ಮ ಪಕ್ಷದಲ್ಲಿ ಮಾತ್ರ ಆಗೋದು ಎಂದು ಮೈಸೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದರು.

2028 ರಲ್ಲಿ ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರತ್ತೆ, ಇದರಲ್ಲಿ ಯಾವುದೇ ಅನುಮಾನ ಇಲ್ಲ. ಡಿಕೆ ಶಿವಕುಮಾರ್ ಸಿಎಂ ಆದ್ರೆ ಅಷ್ಟೇ, ಹೋದ್ಯಾ ಪಿಚಾತಿ ಅಂದ್ರೆ ಬಂದ್ಯಾ ಗವಾಕ್ಷಿ ಅಂತ ಅಷ್ಟೇ. ಸಿದ್ದರಾಮಯ್ಯ ಹೋಗಿ ಡಿಕೆ ಬಂದ್ರು ಅಷ್ಟೇ. ಅತ್ತು ಕರೆದು ಡಿಕೆಶಿ ಸಿಎಂ ಆಗ್ತಿದ್ದಾರೆ ಎಂದರು.

ಡಿಕೆಶಿ ದೆಹಲಿಯಲ್ಲಿ ಎಲ್ಲರನ್ನೂ ಬೇಟಿ ಮಾಡ್ತಿದ್ರು, ಯಾವ ಪಕ್ಷದ ಯಾರನ್ನು ಬೇಟಿ ಮಾಡ್ತಿದ್ರು , ಅದಕ್ಕಾಗಿ ಸ್ವಲ್ಪ ಬದಲಾವಣೆ ಹೈ ಕಮಾಂಡ್ ಮುಂದಾಗಿದೆ. ಬಿಜೆಪಿ ಯಾವುದೇ ಲಾಭ ಪಡೆಯಲ್ಲ. ಯಾವುದೇ ಆತುರ ಕಾತುರ ಬಿಜೆಪಿಗಿಲ್ಲ. ಜನರೇ ಬಿಜೆಪಿಗೆ ವೋಟ್ ಹಾಕಿಸಿ ಗೆಲ್ಲಿಸುತ್ತಾರೆ ಎಂದು ಮೈಸೂರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದರು.