ಮೈಸೂರು: ಗೋವಾ ಪ್ರವಾಸಕ್ಕೆ ತೆರಳಿ ಹಿಂದಿರುಗಿದ ವೈದ್ಯರಿಗೆ ಕಳ್ಳರು ಶಾಕ್ ಕೊಟ್ಟಿದ್ದಾರೆ. ಮನೆಯಲ್ಲಿದ್ದ 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ನಗದು ದೋಚಿದ್ದಾರೆ. ಈ ಸಂಬಂಧ ಡಾ.ಸಿದ್ದರಾಮು ರವರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾನಸಿನಗರದಲ್ಲಿ ವಾಸವಿರುವ ಡಾ.ಸಿದ್ದರಾಮು ರವರು ಮೇ 9 ರಂದು ಗೋವಾ ಪ್ರವಾಸಕ್ಕೆ ತೆರಳಿದ್ದರು. ಮೇ 11 ರಂದು ಪ್ರವಾಸದಿಂದ ಹಿಂದಿರುಗಿದ್ದಾರೆ. ಟೆರೇಸ್ ನ ಬಾಗಿಲನ್ನ ಮೀಟಿ ಪ್ರವೇಶಿಸಿರುವ ಕಳ್ಳರು 7 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ ಹಾಗೂ ಲಾಕರ್ ನಲ್ಲಿದ್ದ 20 ಸಾವಿರ ನಗದು ದೋಚಿದ್ದಾರೆ.

