ಮೈಸೂರು: ಭಾರತ ಹಿಂದು ರಾಷ್ಟ್ರ ಆಗಬಾರದ ಎಂಬ ಯತೀಂದ್ರ ಹೇಳಿಕೆಗೆ ಶೋಭಾ ಕರಂದ್ಲಾಜೆ ತಿರುಗೇಟು ಕೊಟ್ಟಿದ್ದಾರೆ. ಯತೀಂದ್ರ ಹೋಗಿ ತನ್ನ ತಾಯಿಗೆ ಈ ಬಗ್ಗೆ ಪ್ರಶ್ನೆ ಕೇಳಲಿ. ನಾವು ಯಾರು, ನಮ್ಮ ಸಂಸ್ಕೃತಿ ಯಾವುದು, ನಮ್ಮ ಧರ್ಮ ಯಾವುದು ಎಂದು ನಾವು ಯಾವುದನ್ನ ಆಚರಣೆ ಮಾಡುತ್ತೇವೆ ಎಂಬುದನ್ನ ಯತೀಂದ್ರ ಅವರ ತಾಯಿಯ ಬಳಿ ಕೇಳಲಿ ಎಂದರು.
ಯತೀಂದ್ರರನ್ನ ಎತ್ತು ಹೊತ್ತ ಸಿದ್ದರಾಮಯ್ಯನವರ ಪತ್ನಿ ಅವರೇ ಮಗನಿಗೆ ಸರಿಯಾದ ಉತ್ತರ ಕೊಡುತ್ತಾರೆ ಎಂದು. ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ತಿಳಿಸಿದ್ದಾರೆ. ಈ ಸಂಸ್ಕೃತಿ ಈ ಧರ್ಮ ಉಳಿಸುವವರಿಗೆ ತಾಯಿ ಚಾಮುಂಡಿ ಶಕ್ತಿ ಕೊಡಲಿ. ಮಹರಾಜರು ಈ ನೆಲದ ಸಂಸ್ಕೃತಿ ಧರ್ಮವನ್ನ ಉಳಿಸಿದರು. ಇವತ್ತು ಸರ್ಕಾರ ನಡೆಸುವವರು ಕೂಡ ಅದೇ ಸ್ಥಾನದಲ್ಲಿ ಇರುತ್ತಾರೆ.ಸಂಸ್ಕೃತಿ ಉಳಿಸುವವರಿಗೆ ತಾಯಿ ಆಶೀರ್ವಾದ ಇರಲಿ.
ಎಸ್ಐಆರ್ ವಿಚಾರವಾಗಿ ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳು ಡಿಲಿಟ್ ಆಗಿರುವುದು ಕರ್ನಾಟಕದಲ್ಲಿ. ಅದರಲ್ಲೂ ನನ್ನ ಕ್ಷೇತ್ರದಲ್ಲಿ ಬಹಳಷ್ಟು ಮತಗಳು ಡಿಲಿಟ್ ಆಗಿದೆ. ಜನ ತಮ್ಮ ಸ್ವಂತ ಊರುಗಳಲ್ಲಿ ಮತ ಇಟ್ಟುಕೊಳ್ಳುತ್ತಿದ್ದಾರೆ. ಕನ್ನಡಿಗರು ಎಲ್ಲಿದರೂ ಕನ್ನಡಿಗರೇ, ಎಲ್ಲದರೂ ಇರಲಿ ಮತದಾರರಾಗಿರಲಿ ಎಂದು ಚಾಮುಂಡಿ ಬೆಟ್ಟದ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಹೇಳಿಕೆ ನೀಡಿದರು.

