ಮೈಸೂರು :ಶಿವಮೊಗ್ಗ ಗಲಾಟೆ ವಿಚಾರವಾಗಿ ಮೈಸೂರಿನಲ್ಲಿ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಇದು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ಅಲ್ಪಸಂಖ್ಯಾತರನ್ನ ಓಲೈಕೆ ಮಾಡುತ್ತಿರುವುದು ಗಲಾಟೆಗೆ ಕಾರಣ. ಸಿದ್ದರಾಮಯ್ಯ ಸರ್ಕಾರ ಇದೆ ಏನು ಮಾಡಿದ್ರು ನಡೆಯುತ್ತೆ ಅಂದುಕೊಂಡಿದ್ದಾರೆ ಎಂದರು.
ಧೈರ್ಯದಿಂದ ಇಂತಹ ದುಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಕೋಮು ಸೌಹರ್ಧತೆಯನ್ನ ಕಾಪಾಡಿಕೊಂಡು ಬಂದಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದ್ರೆ ಇದಕ್ಕೆ ಸರ್ಕಾರವೇ ಹೊಣೆ. ಜನ ಗ್ಯಾರಂಟಿ ಬೇಡ ಅಂದ್ರೆ ರಸ್ತೆ ಮಾಡಿಸುತ್ತೇವೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಬಸವರಾಜ ರಾಯರೆಡ್ಡಿ ಅವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೆಚ್ಚು ಮಾಹಿತಿ ಇದೆ. ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡಲು ಸರ್ಕಾರಕ್ಕೆ ಆಗುತ್ತಿಲ್ಲ. ಬಸವರಾಜ ರಾಯರೆಡ್ಡಿಯದ್ದ ಅಹಂಕಾರದ ಮಾತು. ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ಅವರ ಆರ್ಥಿಕ ಸಲಹೆಗಾರರ ಮೂಲಕ ಆಗೊಲ್ಲ ಅನ್ನೊದನ್ನ ಹೇಳಿಸುತ್ತಿದ್ದಾರೆ. ಸಿದ್ದರಾಮಯ್ಯ ಈಗಿನ ಎರಡು ವರ್ಷ ಅಲ್ಲ, ಹಿಂದಿನ 5 ವರ್ಷ ಮೈಸೂರಿಗೆ ಏನು ಕೊಟ್ಟಿದ್ದಾರೆ ಹೇಳಲಿ ಎಂದರು.

