ತಿ. ನರಸೀಪುರ: ದ್ವಿತೀಯ ಪಿಯುಸಿ ಮರು ಪರೀಕ್ಷೆ ಕಟ್ಟಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದು, ಮೂರು ದಿನಗಳಿಂದ ಸರ್ವರ್ ಡೌನ್ ಆಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆತಂಕ ಸೃಷ್ಟಿಯಾಗಿದೆ.

ಸೈಬರ್, ಕಂಪ್ಯೂಟರ್ ಸೆಂಟರ್ ಗಳ ಮುಂದೆ ವಿದ್ಯಾರ್ಥಿಗಳ ಕ್ಯೂ ನಿಂತಿದ್ದಾರೆ. ಪರೀಕ್ಷೆ ಕಟ್ಟಲು ಇಂದು ಕೊನೆ ದಿನವಾಗಿದೆ. ಕಳೆದ ಮೂರು ದಿನಗಳಿಂದ ಸರ್ವರ್ ಡೌನ್ ಆಗಿದೆ.

ನಮ್ಮ ಮಕ್ಕಳು ಮರು ಪರೀಕ್ಷೆ ಬರೆಯಲು ಅಪ್ಲಿಕೇಶನ್ ಹಾಕಲು ಸಾಧ್ಯವಾಗ್ತಿಲ್ಲ. ಸರ್ಕಾರ ದ್ವಿತೀಯ ಪಿಯುಸಿ ಮರು ಪರೀಕ್ಷೆ ದಿನಾಂಕ ಮುಂದೂಡಬೇಕು. ಪದೇ ಪದೇ ಸರ್ವರ್ ಡೌನ್ ಆಗೋದನ್ನ ತಪ್ಪಿಸಬೇಕು ಎಂದು ಸರ್ಕಾರಕ್ಕೆ ವಿದ್ಯಾರ್ಥಿಗಳು ಪೋಷಕರು ಮನವಿ ಮಾಡಿದ್ದಾರೆ.

View this post on Instagram

A post shared by News Karnataka (@newskarnataka)