ನಂಜನಗೂಡು: ತಾಲ್ಲೂಕಿನ ದಲಿತ ಸಂಘರ್ಷ ಸಮಿತಿ ಸಂಯೋಜಕದ ಹುಲ್ಲಹಳ್ಳಿ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನಗರದ ಹುಲ್ಲಹಳ್ಳಿ ಹೋಬಳಿಯ ನೀರಾವರಿ ಇಲಾಖೆಯ ಅತಿಥಿಗೃಹದಲ್ಲಿ ದಸಂಸ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ರವರ ನೇತೃತ್ವದಲ್ಲಿ ದಸಂಸ ತಾಲ್ಲೂಕು ಸಂಯೋಜಕರಾದ ಶಿವರಾಜು ಗಟ್ಟವಾಡಿಪುರ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಂಘಟನೆಯನ್ನು ಬಲಪಡಿಸಲು ಹೋಬಳಿಯ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬಳಿಕ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ದಸಂಸ ಸಂಯೋಜಕ ಗಟ್ಟವಾಡಿ ಪುರ ಶಿವರಾಜು ಮಾತನಾಡಿ, ದಲಿತ ಸಂಘರ್ಷ ಸಮಿತಿಯು ಕಳೆದ 50 ದಶಕಗಳಿಂದಲೂ ಈ ನೆಲದ ಶೋಷಿತ ಸಮುದಾಯಗಳ ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ಗ್ರಾಮಮಟ್ಟದಿಂದ ರಾಜ್ಯದ ತನಕ ಅನೇಕ ಹೋರಾಟಗಳನ್ನು ಹಮ್ಮಿಕೊಳ್ಳುವುದಲ್ಲದೇ ಭೂಮಿ, ವಸತಿ, ಮೂಲಭೂತ ಸೌಲಭ್ಯಗಳು, ಶಿಕ್ಷಣ, ಆರೋಗ್ಯ ಮತ್ತು ವಿದ್ಯಾರ್ಥಿ ವೇತನಕ್ಕಾಗಿ ಹಲವಾರು ವಿರೋಚಿತ ಹೋರಾಟಗಳನ್ನು ರೂಪಿಸಿದೆ.

ಅಲ್ಲದೇ ಶೋಷಿತ ಮೇಲೆ ನಡೆಯುವ ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರ, ಬಹಿಷ್ಠಾರ ಮುಂತಾದ ಅಮಾನುಷ ಘಟನೆಗಳನ್ನು ಖಂಡಿಸಿ ಹೋರಾಟ ಮಾಡಿರುವುದಲ್ಲದೇ ಶೋಷಿತ ಸಮುದಾಯಗಳ ಸ್ವಾಭಿಮಾನದ ಬದುಕಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪ್ರಸ್ತುತ ಸಂದರ್ಭದಲ್ಲಿ ದಲಿತರಿಗೆ ಸವಾಲಾಗಿರುವ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಕಾಲ ಕಾಲಕ್ಕೆ ಪ್ರತಿರೋಧವೊಡ್ಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯನ್ನು ಬಲಪಡಿಸಲು, ಪ್ರತಿ ಹೋಬಳಿ ಮಟ್ಟದಲ್ಲಿ ಸಂಘಟಕರನ್ನು ಒಗ್ಗೂಡಿಸಲು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ, ರಾಜ್ಯ ಸಮಿತಿ ಸದಸ್ಯ ಎಂ.ಶಿವಣ್ಣ ಕಂದೇಗಾಲ, ಜಿಲ್ಲಾ ಸಮಿತಿ ಸದಸ್ಯ ಕೆ.ಕೆ ಕೃಷ್ಣಮೂರ್ತಿ, ತಾಲ್ಲೂಕು ಸಮಿತಿ ಪದಾಧಿಕಾರಿಗಳಾದ ಹುಲ್ಲಹಳ್ಳಿ ಚಿಕ್ಕಣ್ಣ, ಮಲ್ಲುಂಡಿ ಕೃಷ್ಣ, ಮಲ್ಲುಂಡಿ ಪುಟ್ಟಬುದ್ದಿ, ಹುಲ್ಲಹಳ್ಳಿ ಮರಿಸ್ವಾಮಿ ಇವರುಗಳು ಸಭೆಯಲ್ಲಿ ಹಾಜರಿದ್ದು ಇವರುಗಳ ಸಮ್ಮುಖದಲ್ಲಿ ಹೋಬಳಿಯ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಹುಲ್ಲಹಳ್ಳಿ ಹೋಬಳಿ ದಸಂಸ ಸಂಯೋಜಕರಾಗಿ ಯೋಗೇಶ್.ಸಿ, ಸಂಘಟನಾ ಸಂಯೋಜಕ ಚಿನ್ನಸ್ವಾಮಿ ಕಂದೇಗಾಲ, ಖಜಾಂಚಿ ನಾಗರಾಜು, ಸದಸ್ಯರಾದ ಗೋಪಾಲ್ ಹೆಡಿಯಾಲ, ಸ್ವಾಮಿ ವಡೆಯನಪುರ, ಸಿದ್ದರಾಜು, ನಾರಾಯಣ ವಡೆಯನಪುರ, ಹರೀಶ್ ಬೆಳಲೆ, ಯೋಗೇಶ್, ದರ್ಶನ್, ಪುಟ್ಟಸಿದ್ದು ರವರನ್ನು ಆಯ್ಕೆ ಮಾಡಿ ಅಭಿನಂದಿಸಿದರು.