ಮೈಸೂರು : ಶಾಲಾ ವಾಹನ ಪಲ್ಟಿಯಾಗಿ ಮಕ್ಕಳಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಹಬ್ಬನಗುಪ್ಪೆ ಗ್ರಾಮದ ಬಳಿ ಶಾಲಾ ವಾಹನ ಇದಾಗಿದ್ದು, ಕಂಪಲಾಪುರ ನೊಬೆಲ್ ಶಾಲೆಗೆ ಸೇರಿದ ವಾಹನವಾಗಿದೆ.

ವಾಹನದ ಮುಂಭಾಗದ ಟೈಯರ್ ಪಂಚರ್ ಆದ ಕಾರಣ ವಾಹನ ಹಳ್ಳಕ್ಕೆ ಬಿದ್ದಿದೆ. ವಾಹನದಲ್ಲಿದ್ದ ಸುಮಾರು 16 ಮಕ್ಕಳಿದ್ದರು. ಸದ್ಯ ಮಕ್ಕಳನ್ನು ಹುಣಸೂರು ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ರವಾನೆ ಮಾಡಲಾಗಿದೆ. ಹುಣಸೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಗಾಯಾಳು ಮಕ್ಕಳನ್ನು ಮೈಸೂರಿಗೆ ರವಾನೆ ಮಾಡಲಾಗಿದೆ.