ಮೈಸೂರು : ಹೊಸ ವರ್ಷದ ಹೆಸರಿನಲ್ಲಿ ಬರುವ ಮೆಸೇಜ್ ಓಪನ್ ಮಾಡುವ ಮುನ್ನ ಎಚ್ಚರ ಅಗತ್ಯ. ಶುಭಾಶಯ ಕೋರುವ ನೆಪದಲ್ಲಿ ಖಾತೆಗೆ ಕನ್ನ ಬೀಳುವ ಸಾಧ್ಯತೆ ಇದೆ. ಸೈಬರ್ ವಂಚಕರಿದ್ದು, ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.
ಶುಭಾಶಯ, ಉಡುಗೊರೆಯ ನೆಪದಲ್ಲಿ ವಂಚನೆ ನಡೆಯುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೈಸೂರು ನಗರ ಹಾಗೂ ಜಿಲ್ಲಾ ಪೊಲೀಸರಿಂದ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರ ಪ್ರಕಟಣೆ ಹೊರಡಿಸಿ ಸಂದೇಶ ರವಾನಿಸಲಾಗಿದೆ.

