ಕೊಳ್ಳೆಗಾಲ: ದಿನಗೂಲಿ ನೌಕರರರಿಗೆ ವೇತನದ ಸಮಸ್ಯೆ ಉಂಟಾಗಿದ್ದು, ಎಪ್ರೀಲ್‌ ಮೇ ತಿಂಗಳ ಕಷ್ಟ ಪರಿಹಾರ ಭತ್ಯೆ ಪಾವತಿಸದೆ ಇದ್ದು, ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಮಾಡುತ್ತಿರುವ ಕಛೇರಿ ಸಿಬ್ಬಂದಿಗಳು ಹಾಗೂ ಎಪಿಸಿ ಕ್ಯಾಂಪ್‌ ವ್ಯಾಪಾರಿಗಳು  ರಾಜ್ಯ ಅಧ್ಯಕ್ಷರು ಹಾಗೂ ನಮ್ಮ ಕನ್ನಡಿಗರ ವಿಜಯ ಸೇವೆ ಬೆಂಗಳೂರು ಇವರಲ್ಲಿ ನ್ಯಾಯ ಕೊಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.

ನಮಗೆ ಎಪ್ರೀಲ್‌ ಮೇ ತಿಂಗಳ ಕಷ್ಟ ಪರಿಹಾರ ಭತ್ಯೆ ಇದುವರೆಗೂ ಪಾವತಿಸಿಲ್ಲ. ಇದನ್ನೇ ಕುಟುಂಬ ಕೆಲಸಕ್ಕೆ ಹಾಗೂ ಕಷ್ಟ ಪರಿಹಾರ ಭತ್ಯೆಯನ್ನು ಕೊಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.