ಮೈಸೂರು : ಪ್ರಧಾನಿ ಮೋದಿ ಮೈಸೂರಿಗೆ ಆಗಮನ ಹಿನ್ನೆಲೆ ಮೈಸೂರು ಸಂಚಾರದಲ್ಲಿ ಬದಲಿ ಮಾರ್ಗ ಬಳಕೆಗೆ ಸೂಚನೆ ನೀಡಲಾಗಿದೆ. ಮೈಸೂರು ಪೊಲೀಸ್ ಆಯುಕ್ತರಿಂದ ಬದಲಿ‌ ಮಾರ್ಗ ಪ್ರಕಟವಾಗಿದ್ದು, ಸಾರ್ವಜನಿಕರು ಬದಲಿ‌ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.

ವಾಹನ ಸಂಚಾರ ನಿರ್ಬಂಧಿಸಲಾಗುವ ರಸ್ತೆಗಳ ವಿವರ

  1. ಕೆ.ಆರ್.ಐ ರಸ್ತೆ – ಡಿ.ಸಿ. ಕಚೇರಿ ಆರ್ಚ್ ಜಂಕ್ಷನ್‌ನಿಂದ ಏಕಲವ್ಯ ವೃತ್ತದವರೆಗೆ.
  2. ಬೋಗಾದಿ ರಸ್ತೆ – ಮೂಡಾ ಜಂಕ್ಷನ್‌ನಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ.
  3. ಹುಣಸೂರು ರಸ್ತೆ – ಪಡುವಾರಹಳ್ಳಿ ಜಂಕ್ಷನ್‌ನಿಂದ ಮೆಟ್ರೋಪೋಲ್ ವೃತ್ತದವರೆಗೆ.
  4. ಜೆ.ಎಲ್.ಬಿ ರಸ್ತೆ – ರೈಲ್ವೆ ನಿಲ್ದಾಣ ಜಂಕ್ಷನ್‌ನಿಂದ ಆರ್.ಟಿ.ಓ ವೃತ್ತದವರೆಗೆ.
  5. ರಾಮವಿಲಾಸ ರಸ್ತೆ – ಮೂಡಾ ಜಂಕ್ಷನ್‌ನಿಂದ ಬನುಮಯ್ಯ ಜಂಕ್ಷನ್‌ವರೆಗೆ.
  6. ಕೃಷ್ಣವಿಲಾಸ ರಸ್ತೆ – ರೋಟರಿ ಜಂಕ್ಷನ್‌ನಿಂದ ಜಗನ್ಮೋಹನ ಪ್ಯಾಲೇಸ್ ಜಂಕ್ಷನ್‌ವರೆಗೆ.
  7. ದಿವಾನ್ಸ್ ರಸ್ತೆ – ಶೃಂಗಾರ್ ಜಂಕ್ಷನ್‌ನಿಂದ ಕಾಲೇಜು ರಸ್ತೆ ಜಂಕ್ಷನ್‌ವರೆಗೆ.
  8. ಎನ್.ಎಸ್. ರಸ್ತೆ – ಪಿ. ಕಾಳಿಂಗರಾವ್ ವೃತ್ತದಿಂದ ತಾತಯ್ಯ ವೃತ್ತದವರೆಗೆ.
  9. ಕೆ.ಆರ್.ಎಸ್ ರಸ್ತೆ – ದಾಸಪ್ಪ ವೃತ್ತದಿಂದ ಹಸುಕರು ಪಾರ್ಕ್ ಜಂಕ್ಷನ್‌ವರೆಗೆ.
  10. ಪರಮಹಂಸ ರಸ್ತೆ – ಬಿ.ಸಿ. ಅಂಗಯ್ಯ ವೃತ್ತದಿಂದ ಮಾಲ್ಗುಡಿ ಜಂಕ್ಷನ್‌ವರೆಗೆ.
  11. ವಾಲ್ಮೀಕಿ ರಸ್ತೆ – ವಾಲ್ಮೀಕಿ ರಸ್ತೆ ಜಂಕ್ಷನ್‌ನಿಂದ ಕೆ.ಆರ್.ಎಸ್ ರಸ್ತೆಯವರೆಗೆ.
  12. ವಿವೇಕಾನಂದ ರಸ್ತೆ – ಆಕಾಶವಾಣಿ ವೃತ್ತದಿಂದ ಮಾಲ್ಗುಡಿ ಜಂಕ್ಷನ್‌ವರೆಗೆ.

ಬದಲಿ ಮಾರ್ಗಗಳು

ಹುಣಸೂರು ರಸ್ತೆ, ವಿಜಯನಗರ, ಹೂಟಗಳ್ಳಿ, ಬೋಗಾದಿ, ಸರಸ್ವತಿಪುರಂ, ಕುವೆಂಪುನಗರ ಭಾಗಗಳಿಂದ ಬಸ್/ರೈಲ್ವೆ ನಿಲ್ದಾಣಕ್ಕೆ ತೆರಳುವವರು:

ದ್ಯುತಿ ಜಂಕ್ಷನ್-ಗೋಕುಲಂ ರಸ್ತೆ-ಶರ್ಮಿಲಾ ಕಾನ್ವೆಂಟ್ ರಸ್ತೆ
-ಹಸುಕರು ಪಾರ್ಕ್ ಜಂಕ್ಷನ್
-ಇ.ಎಸ್.ಐ ಆಸ್ಪತ್ರೆ ಜಂಕ್ಷನ್
-ಸೆಕ್ಷನ್ ರಸ್ತೆ
-ಜಾವಾ ರಸ್ತೆ
-ಹೈವೇ ವೃತ್ತ
-ಆರ್.ಎಂ.ಸಿ ವೃತ್ತ
-ಆಯುರ್ವೇದಿಕ್ ವೃತ್ತ
ಮೂಲಕ ಸಂಚರಿಸಬೇಕು.

ಅಗ್ರಹಾರ, ವಿದ್ಯಾರಣ್ಯಪುರಂ, ಅಶೋಕಪುರಂ, ಜೆ.ಪಿ.ನಗರ ಕಡೆಯಿಂದ ಬಸ್/ರೈಲ್ವೆ ನಿಲ್ದಾಣಕ್ಕೆ ತೆರಳುವವರು:

-ಆರ್.ಟಿ.ಓ ವೃತ್ತ-ಸಿದ್ದಪ್ಪ ಸ್ಕ್ವೇರ್-ಅಗ್ರಹಾರ ವೃತ್ತ-* ಎಂ.ಜಿ ರಸ್ತೆ
-ಎಂ.ಆರ್.ಸಿ ವೃತ್ತ
-ಮೃಗಾಲಯ ರಸ್ತೆ
-ಹಾರ್ಡಿಂಜ್ ವೃತ್ತ- ಬಿ.ಎನ್. ರಸ್ತೆ
ಮೂಲಕ ಸಾಗಬೇಕು.

ಬಸ್/ರೈಲ್ವೆ ನಿಲ್ದಾಣದಿಂದ ಹುಣಸೂರು ರಸ್ತೆ ಕಡೆಗೆ ತೆರಳುವವರು

  • ಜೆ.ಕೆ. ಮೈದಾನ ಜಂಕ್ಷನ್-ಹೈವೇ ವೃತ್ತ- ಜಾವಾ ರಸ್ತೆ
    -ಬೃಂದಾವನ ಎಕ್ಸ್‌ಟೆನ್ಷನ್ ರಸ್ತೆ
    -ಇ.ಎಸ್.ಐ ಆಸ್ಪತ್ರೆ ಜಂಕ್ಷನ -ಕೆ.ಆರ್.ಎಸ್ ರಸ್ತೆ-ಹಸುಕರುಪಾರ್ಕ್ ಜಂಕ್ಷನ್
    -ಗೋಕುಲಂ-ದ್ಯುತಿಮೋಟಾರ್ಸ್ ಜಂಕ್ಷನ್
    ಮೂಲಕ ಹುಣಸೂರು ರಸ್ತೆ ತಲುಪಬೇಕು.

ಬಸ್/ರೈಲ್ವೆ ನಿಲ್ದಾಣದಿಂದ ವಿದ್ಯಾರಣ್ಯಪುರಂ, ಅಶೋಕಪುರಂ, ಸರಸ್ವತಿಪುರಂ, ಜೆ.ಪಿ.ನಗರ ಕಡೆಗೆ ತೆರಳುವವರು:

  • ಆಯುರ್ವೇದಿಕ್ ವೃತ್ತ -ನೆಹರು ವೃತ್ತ- ಬಸ್ ನಿಲ್ದಾಣ-* ಹಾರ್ಡಿಂಜ್ ವೃತ್ತ- ಮೃಗಾಲಯ ರಸ್ತೆ
    -ಎಂ.ಆರ್.ಸಿ ವೃತ್ತ -ಎಂ.ಜಿ ರಸ್ತೆ-ಅಗ್ರಹಾರ ವೃತ್ತ
    -ಆರ್.ಟಿ.ಓ ವೃತ್ತ
    ಮೂಲಕ ಸಂಚರಿಸಬೇಕು.

ವಿದ್ಯಾರಣ್ಯಪುರಂ, ಅಶೋಕಪುರಂ, ಜೆ.ಪಿ.ನಗರ, ಶ್ರೀರಾಮಪುರ, ಗನ್ ಹೌಸ್ ಕಡೆಯಿಂದ ಹುಣಸೂರು ರಸ್ತೆ ಕಡೆಗೆ ತೆರಳುವ ವಾಹನಗಳು:

  • ಅಗ್ರಹಾರ ವೃತ್ತ
  • ಸಿದ್ದಪ್ಪ ಸ್ಕ್ವೇರ್
  • ಆರ್.ಟಿ.ಓ ವೃತ್ತ
  • ಕೋರ್ಟ್ ಜಂಕ್ಷನ್
  • ಅಗ್ನಿಶಾಮಕ ಠಾಣೆ ಜಂಕ್ಷನ್
  • ಡಾ. ಬಿ.ಆರ್. ಅಂಬೇಡ್ಕರ್ ವೃತ್ತ
  • ಬೋಗಾದಿ ರಸ್ತೆ
  • ಪಡುವಾರಹಳ್ಳಿ ಜಂಕ್ಷನ್
    ಮೂಲಕ ಸಾಗಬೇಕು.