ನಂಜನಗೂಡು: ಇದೇ ಜುಲೈ 21 ರಂದು ಸೋಮವಾರ ದೊಡ್ಡ ಕವಲಂದೆ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಯಲಿದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ತಿಳಿಸಿದ್ದಾರೆ.

ಕಂದಾಯ ಇಲಾಖೆ, ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಗಳ ಕಾರ್ಯಾಲಯ ನಂಜನಗೂಡು, ದೊಡ್ಡ ಕವಲಂದೆ ಉಪ ತಹಶೀಲ್ದಾರ್ ಕಾರ್ಯಾಲಯ ವತಿಯಿಂದ ಆಯೋಜಿಲಾಗಿರುವ ಕಂದಾಯ ಅದಾಲತ್, ಪಿಂಚಣಿ ಅದಾಲತ್, ಇ-ಪೌತಿ ಖಾತೆ ಅದಾಲತ್ ಹಾಗೂ ಜನಸಂಪರ್ಕ ಸಭೆಯನ್ನು ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಜು.21 ರಂದು ಬೆಳಿಗ್ಗೆ 11 ಗಂಟೆಗೆ ದೊಡ್ಡಕವಲಂದೆ ಗ್ರಾಮದ ಶಾದಿ ಮಹಲ್ ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಾಲತ್ ಕಾರ್ಯಕ್ರಮದಲ್ಲಿ ಆರ್.ಟಿ.ಸಿ. ಒಟ್ಟುಗೂಡಿಸುವುದು. ಎಂ.ಆರ್. ನಂತೆ ಪಹಣಿ ತಿದ್ದುಪಡಿ ಹಾಗೂ ಇಂಡೀಕರಣ. ಪೋಡಿಯಂ ಆರ್.ಟಿ.ಸಿ. ಇಂಡೀಕರಣ, ಆರ್.ಟಿ.ಸಿ.ಯಲ್ಲಿ ಹೆಸರು ತಿದ್ದುಪಡಿ, ಆಕಾರ್ ಬಂದ್‌ನಂತೆ ಆರ್.ಟಿ.ಸಿ. ತಿದ್ದುಪಡಿ, ಆರ್.ಟಿ.ಸಿ. ಕಾಲಂ 12(2) ರಲ್ಲಿ ಎಂ.ಆರ್.ನಂತೆ ಹೆಸರು ತಿದ್ದುಪಡಿ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮೈತ್ರಿ ಹಾಗೂ ಮನಸ್ವಿನಿ ಪಿಂಚಣಿಗಳ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗುತ್ತದೆ.

ಆರ್.ಟಿ.ಸಿ. ಒಟ್ಟುಗೂಡಿಸುವುದಕ್ಕೆ ಆಕಾರ್ ಬಂದ್, ಸರ್ವೆ ನಂಬರ್‌ಗಳ ಎಲ್ಲಾ ಆರ್.ಟಿ.ಸಿಗಳು, ಎಂ.ಆರ್. ನಂತೆ ಪಹಣಿ ತಿದ್ದುಪಡಿ ಹಾಗೂ ಇಂಡೀಕರಣ ಮಾಡಿಕೊಳ್ಳಲು ಎಂ. ಆರ್. ದೃಢೀಕೃತ ಪ್ರತಿ, ಸರ್ವೆ ನಂಬರ್ ಆರ್.ಟಿ.ಸಿ, ಪೋಡಿಯಂ ಆರ್.ಟಿ.ಸಿ. ಇಂಡೀಕರಣಕ್ಕೆ ನಮೂನೆ 5 (ಆರ್.ಆರ್. ಪಕ್ಕ) ಆಕಾರ್ ಬಂದ್, ಎಲ್ಲಾ ಆರ್.ಟಿ.ಸಿ. ಹಾಗೂ ದೃಢೀಕೃತ ಎಂ.ಆರ್. ಪ್ರತಿಗಳನ್ನು ಲಗತ್ತಿಸಬೇಕು.

ಆರ್.ಟಿ.ಸಿ.ಯಲ್ಲಿ ಹೆಸರು ತಿದ್ದುಪಡಿ ಮಾಡಲು ಆರ್.ಟಿ.ಸಿ. ಮತ್ತು ಸಂಬಧಿಸಿದ ದೃಢೀಕೃತ ಎಂ.ಆರ್. ಪ್ರತಿ ನೀಡಬೇಕು. ಆಕಾರ್ ಬಂದ್‌ನಂತೆ ಆರ್.ಟಿ.ಸಿ. ತಿದ್ದುಪಡಿ ಮಾಡಲು ಆಕಾರ್ ಬಂದ್, ಸರ್ವೆ ನಂಬರ್‌ಗಳ ಎಲ್ಲಾ ಆರ್.ಟಿ.ಸಿ. ದೃಢೀಕೃತ ಎಂ.ಆರ್. ಪ್ರತಿಗಳು, ಆರ್.ಟಿ.ಸಿ ಕಾಲಂ12(2) ರಲ್ಲಿ ಎಂ.ಆ‌ರ್.ನಂತೆ ಹೆಸರು ತಿದ್ದುಪಡಿ ಮಾಡಿಕೊಳ್ಳಲು ಆ‌ರ್.ಟಿ.ಸಿ. ಮತ್ತು ಸಂಬಂಧಿಸಿದ ಎಂ.ಆರ್. ಪ್ರತಿಗಳು, ಇ-ಪೌತಿ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸುವವರು ಆರ್.ಡಿ. ವಂಶವೃಕ್ಷ, ಮರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆರ್.ಟಿ.ಸಿ., ಎಂ.ಆ‌ರ್ ನೀಡಬೇಕು.

ಸಾಮಾಜಿಕ ಯೋಜನೆ ಪಿಂಚಣಿಗೆ ಸಂಬಂಧಿಸಿದಂತೆ ನಿಗಧಿಪಡಿಸಿರುವ ನಮೂನೆ-1, ಪೋಟೋ, ಬ್ಯಾಂಕ್ ಪಾಸ್ ಬುಕ್, ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯ ವರಮಾನ ಪತ್ರ, ಶಾಲಾ ದಾಖಲಾತಿ, ವೈದ್ಯಕೀಯ ಪತ್ರವನ್ನು ಸಲ್ಲಿಸಬೇಕು. ಯಾವುದೇ ಸೌಲಭ್ಯಗಳನ್ನು ನೀವು ಪಡೆಯಬೇಕಾದಲ್ಲಿ ನಿಮ್ಮ ಜಮೀನಿನ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ದೊಡ್ಡಕವಲಂದೆ ಹೋಬಳಿಯ ರೈತರು ಇದರ ಸದುಪಯೋಗಪಡಿಸಿಕೊಂಡು ನಿಮ್ಮ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮನವಿ ಮಾಡಿದ್ದಾರೆ.