ಮೈಸೂರು : ನಿತ್ರಾಣಗೊಂಡು ಕೆಳಗೆ ಬಿದ್ದಿದ್ದ ಹದ್ದಿನ ರಕ್ಷಣೆ ಮಾಡಿರುವ ಘಟನೆ ಮೈಸೂರು ಅಗ್ರಹಾರದ ಶೃಂಗೇರಿ ಶಾರದಾಂಬೆ ದೇಗುಲದ ಬಳಿ ನಡೆದಿದೆ.

ಸುಸ್ತಾಗಿ ಕೆಳಗೆ ಬಿದ್ದು ಒದ್ದಾಡುತ್ತಿದ್ದ ಹದ್ದಿಗೆ ಸ್ಥಳೀಯರು ನೀರು ಕುಡಿಸಿದರು. ಪಕ್ಷಿ ಸಂರಕ್ಷಕ ಡಾ ಅಜಯ್ ಕುಮಾರ್‌ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದು ಹದ್ದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಹದ್ದು ಸ್ವಲ್ಪ ಚೇತರಿಸಿಕೊಂಡಿತು. ಹೆಚ್ಚಿನ ಚಿಕಿತ್ಸೆಗಾಗಿ ಡಾ ಅಜಯ್ ಚಿಕಿತ್ಸಾಲಯಕ್ಕೆ ತೆಗೆದುಕೊಂಡು ಹೋದರು.