ಮೈಸೂರು: ಗ್ರಾಹಕರ ಹಿತರಕ್ಷಣಾ ಕಾಯಿದೆ 1986 ಇತರೆ ಕಾಯಿದೆಗಳಂತೆ ಶಕ್ತಿಯುತವಾಗಿದು, ಗ್ರಾಹಕರು ಮೋಸ ಹೋದಾಗ ಗ್ರಾಹಕರ ಹಿತರಕ್ಷ ಣಾ ಕಾಯಿದೆಯನ್ವಯ ಪರಿಹಾರ ಪಡೆಯಬಹುದು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಜಿಲ್ಲಾಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್ ಹೇಳಿದರು.
ನಗರದ ಜೆ ಪಿ ನಗರದಲ್ಲಿರುವ ಪುಟ್ಟರಾಜು ಗವಾಯಿ ಕ್ರೀಡಾಂಗಣದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಗ್ರಾಹಕ ಜಾಗರಣ ಪಾಕ್ಷಿಕ -2024 (ಗ್ರಾಹಕ ಜಾಗರಣ ಪಖ್ವಾಡ)”ಭಾರತ್ ಮಾತಾ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪಾ ಪ್ರಜ್ವಲಿಸಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಗ್ರಾಹಕರು ಮೋಸ ಹೊದಾಗ ದೂರನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕೆಂಬ ಗೊಂದಲಗಳಿಂದ ದೂರು ಸಲ್ಲಿಸುವುದಿಲ್ಲ. ಗ್ರಾಹಕ ವೇದಿಕೆಯು ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಶೇ. 90 ರಷ್ಟು ಗ್ರಾಹಕರ ಪರವಾಗಿ ಪ್ರತಿಕ್ರಿಯಿಸುತ್ತದೆ. ಗ್ರಾಹಕ ಹಿತರಕ್ಷ ಣಾ ಕಾಯಿದೆ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿಯಾಗಬೇಕಿದೆ ಎಂದರು.
ವಕೀಲರಾದ ರವೀಂದ್ರ ಮಾತನಾಡಿ, ಇಂದಿನ ಮಾರುಕಟ್ಟೆ ಡಿಜಿಟಲ್ ಮಾರುಕಟ್ಟೆಯಾಗಿ, ಆನ್ ಲೈನ್ ವ್ಯವಹಾರ ಮಾಡಲು ಯುವ ಜನರು ಉತ್ಸುಕರಾಗಿರುತ್ತಾರೆ. ಇಲ್ಲಿಯೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರು ಮೋಸ ಹೋದ ನಿದರ್ಶನಗಳಿವೆ. ಆದ್ದರಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರು ಜಾಗೃತರಾಗಿರುವದು ಅವಶ್ಯಕಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ರವಿಶಂಕರ್, ಆನಂದ್ ದಯಾನಂದ್, ಜೆಪಿ ನಗರದ ಹಿರಿಯ ನಾಗರಿಕರ ಸತ್ಸಂಗ ಬಸವರಾಜ್, ಜೈ ಗುರುದೇವ್, ಬಸವರಾಜ್, ಶೇಷಾದ್ರಿ, ಶ್ರೀಕಂಠಯ್ಯ, ಶ್ರೀನಿವಾಸ್ ಗೌಡ, ಪುಟ್ಟ ಮಾದಪ್ಪ, ಹಾಗೂ ಇನ್ನಿತರರು ಭಾಗವಹಿಸಿದ್ದರು.

