ನಂಜನಗೂಡು: ಆರ್‌ಬಿಸಿ ಇವೆಂಟ್ ವತಿಯಿಂದ ಆಯೋಜಿಸಲಾದ ಕಿಡ್ಸ್ ಫ್ಯಾಷನ್ ಶೋ ರಾಜ್ಯಮಟ್ಟದ ಸ್ಪರ್ಧೆಯ ಆಡಿಷನ್ ಕಾರ್ಯಕ್ರಮವು ನಂಜನಗೂಡು ನಗರದಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸಿ.ಚಿಕ್ಕರಂಗನಾಯಕ ಉದ್ಘಾಟಿಸಿ ಮಾತನಾಡಿದರು ಇಂದಿನ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ನೀಡುವಂತಹ ಈ ರೀತಿಯ ಕಾರ್ಯಕ್ರಮಗಳು ಅತ್ಯಗತ್ಯ. ಫ್ಯಾಷನ್ ಶೋ ಎನ್ನುವುದು ಕೇವಲ ರಾಂಪ್ ವಾಕ್ ಅಲ್ಲ, ಅದು ಆತ್ಮವಿಶ್ವಾಸ, ಶಿಸ್ತು ಮತ್ತು ವ್ಯಕ್ತಿತ್ವವನ್ನು ಬೆಳೆಸುವ ವೇದಿಕೆ. ಗ್ರಾಮೀಣ ಭಾಗದ ಪುಟಾಣಿಗಳೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕು ಎಂಬ ಆಸೆ ನನ್ನದಾಗಿದೆ. ಆರ್‌ಬಿಸಿ ಇವೆಂಟ್‌ನವರು ಇಂತಹ ಉತ್ತಮ ವೇದಿಕೆ ಕಲ್ಪಿಸಿದಕ್ಕೆ ಅಭಿನಂದನೆಗಳು ಎಂದು ಹೇಳಿದರು.

ಈ ರಾಜ್ಯಮಟ್ಟದ ಆಡಿಷನ್ ಕಾರ್ಯಕ್ರಮವು ಮಕ್ಕಳ ಪ್ರತಿಭೆಗೆ ದೊಡ್ಡ ವೇದಿಕೆಯಾಗಿ ಮೂಡಿ ಬಂದಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಪುಟಾಣಿ ಪ್ರತಿಭೆಗಳು ತಮ್ಮ ವಿಶೇಷ ಉಡುಗೆ, ರಾಂಪ್ ವಾಕ್ ಮತ್ತು ಆತ್ಮವಿಶ್ವಾಸದ ಪ್ರದರ್ಶನದ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಖ್ಯಾತ ಮಾಡೆಲ್ ಮೋಹಿತ್, ಆರ್‌ಬಿಸಿ ಇವೆಂಟ್‌ನ ಮಾಲೀಕರಾದ ರಾಜಶೇಖರ್ ಮೂರ್ತಿ, ಹಾಗೂ ಎಕ್ಸ್ಪೋ ಡ್ಯಾನ್ಸ್ ಇನ್‌ಸ್ಟಿಟ್ಯೂಟ್‌ನ ಮಾಲೀಕ ಹರ್ಷಿತ್,
ಕಾರ್ತಿಕ್, ಕುಮಾರ್, ವರ್ಷಿಣಿ, ಆಧ್ಯ, ಅಭಿಲಾಶ್ ಸೇರಿದಂತೆ ಹಲವರು ಹಾಜರಿದ್ದರು.