ಮೈಸೂರು

ರಾಮನಗರ: ಮತದಾರರಿಗೆ ನೀಡಲು ತಂದಿದ್ದ ಕುಕ್ಕರ್ ವಶ

ರಾಮನಗರ: ಮತದಾರರಿಗೆ ಹಂಚಿಕೆ ಮಾಡಲು ತಯಾರಿಸಿದ್ದ ಒಟ್ಟು 2471 ಕುಕ್ಕರ್‌ಗಳನ್ನು ತಹಸೀಲ್ದಾರ್ನೇತೃತ್ವದ ಅಧಿಕಾರಿಗಳ ತಂಡ  ತಾಲ್ಲೂಕಿನ ಕರೀಕಲ್‌ದೊಡ್ಡಿ ಗ್ರಾಮದ ಸಮೀಪ ವಶಪಡಿಸಿಕೊಂಡಿದ್ದಾರೆ.

ಬಿಡದಿ ಹೋಬಳಿ ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಕರೀಕಲ್‌ ದೊಡ್ಡಿ ಗ್ರಾಮದ ಬಳಿಯಿರುವ ಹೀರಾಪನ್ನಾ ಹೋಮ್ ಅಪ್ಲೆಯನ್ಸ್ ಕಾರ್ಖಾನೆಯ ಮೇಲೆ ರಾಮನಗರ ತಾಲ್ಲೂಕು ತಹಸೀಲ್ದಾರ್ ತೇಜಸ್ವಿನಿ.ಬಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಕುಕ್ಕರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕುಕ್ಕರ್ ಪ್ಯಾಂಕಿಂಗ್ ಮಾಡುವ ಕಾಟನ್ ಬಾಕ್ಸ್‌ಗಳ ಮೇಲೆ ವಿಶ್ವಾಸ್ ವೈದ್ಯ ಎಂಬ ರಾಜಕೀಯ ಮುಖಂಡನಭಾವಚಿತ್ರವಿದೆ. ಈ ಕುಕ್ಕರ್‌ಗಳನ್ನು  ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ತಯಾರಿಸಲಾಗಿತ್ತು ಎಂದು ಹೇಳಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ಮಧ್ಯಾಹ್ನ 3.30 ಗಂಟೆ ವೇಳೆಗೆ ಕಾರ್ಖಾನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, 3 ಲೀಟರ್ ಸಾಮರ್ಥ್ಯದ ಪ್ಯಾಕಿಂಗ್ ಆಗಿರುವ 2209 ಕುಕ್ಕರ್‌ಗಳು ಹಾಗೂ ಪ್ಯಾಕಿಂಗ್   ಮಾಡದಿರುವ 262 ಕುಕ್ಕರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾಟನ್ ಬಾಕ್ಸ್ ಮೇಲ್ಬಾಗದಲ್ಲಿ “ಸದಾ ನಿಮ್ಮ ಸೇವೆಯಲ್ಲಿ ನಿಮ್ಮ ಮನೆ ಮಗ ವಿಶ್ವಾಸ್ ವೈದ್ಯ” ಎಂದು ಅಭ್ಯರ್ಥಿಯ ಭಾವಚಿತ್ರದ ಸಹಿತ ಪ್ರಿಂಟ್ ಮಾಡಲಾಗಿದೆ. ಕುಕ್ಕರ್‌ಗಳ ಒಟ್ಟು ಮೌಲ್ಯ 18,53,250 ರೂ ಎಂದು ಅಂದಾಜಿಸಲಾಗಿದೆ.

ದಾಳಿಯಲ್ಲಿ ಬಿಡದಿ ಉಪತಹಸೀಲ್ದಾರ್ ಎಂ.ಮಲ್ಲೇಶ್, ರಾಜಸ್ವನಿರೀಕ್ಷಕರಾದ ಶಿವಕುಮಾರ್, ಪ್ರಕಾಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ದಿನೇಶ್‌ಕುಮಾರ್, ಕಂಚುಗಾರನಹಳ್ಳಿ ಪಿಡಿಒ ದೇವರಾಜು ಹಾಗೂ   ಗ್ರಾಮ ಸಹಾಯಕರಾದ ರವಿ, ರಾಮಣ್ಣ ಭಾಗವಹಿಸಿದ್ದರು.   ಈ ಸಂಬಂಧ ವಿಶ್ವಾಸ್ ವೈದ್ಯ, ಪ್ರವೀಣ್‌ಕುಮಾರ್ ಜೈನ್, ಕುನಾಲ್‌ಜೈನ್ ಎಂಬುವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ashika S

Recent Posts

40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ: ಡಿ.ಕೆ.ಶಿವಕುಮಾರ್

ಉತ್ತರ ಪ್ರದೇಶದಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ…

5 mins ago

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೋ ತುಣುಕು ವೈರಲ್

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ…

16 mins ago

ಕೇಜ್ರಿವಾಲ್‌ ನಾಚಿಕೆಯಿಲ್ಲದೇ ಆರೋಪಿ ಬಿಭವ್‌ ಕುಮಾರ್‌ ಜೊತೆ ತಿರುಗಾಟ: ನಿರ್ಮಲಾ ಸೀತಾರಾಮನ್‌

ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆಯನ್ನು ಖಂಡಿಸಿ ಮಾತನಾಡದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಕೇಂದ್ರ ಹಣಕಾಸು ಸಚಿವೆ…

17 mins ago

ಈಜಲು ಹೋಗಿ‌ದ್ದ ಮೂವರು ನೀರುಪಾಲು: 5 ಜನ ಪ್ರಾಣಾಪಾಯದಿಂದ ಪಾರು

ಈಜಲು ಹೋಗಿ‌ದ್ದ ಮೂವರು ನೀರುಪಾಲಾಗಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ.

40 mins ago

“ಪಟ್ಲ ಸಂಭ್ರಮ” ಯಶಸ್ವಿಗೊಳಿಸಲು ಪಟ್ಲ ಸತೀಶ್ ಶೆಟ್ಟಿ ಕರೆ

ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ "ಪಟ್ಲ ಸಂಭ್ರಮ" ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ…

49 mins ago

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ

ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು…

55 mins ago